31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಯನ್ಸ್ ಕ್ಲಬ್ ವತಿಯಿಂದ ಸವಣಾಲು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಸವಣಾಲು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಯನ್ಸ್ ಕ್ಲಬ್ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 30ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ। ಬಿ. ಮುರಳಿ ಬಲಿಪ, ಅವರ ಪತ್ನಿ ಮನೋರಮ ಬಲಿಪ ಮತ್ತು ಪುತ್ರ ಮಂದಾರ ಬಲಿಪ , ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಜಿ.ರವರು, ಶಾಲಾ ಆಡಳಿತ ಸಮಿತಿಯ ಸದಸ್ಯ ವಿವೇಕ್ ಶೆಟ್ಟಿ, ಶಾಲಾ ನಾಯಕ ತೇಜಸ್ ಭಟ್ ಉಪಸ್ಥಿತರಿದ್ದರು.

ಸುಮಾರು 15 ವರ್ಷಗಳಿಂದ ಸತತವಾಗಿ ನೋಟ್ ಪುಸ್ತಕಗಳನ್ನು ನಮ್ಮ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಪುಸ್ತಕ ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.


ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ರವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ವೈಶಾಲಿಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಜಾತ ರವರು ಧನ್ಯವಾದ ನೀಡಿ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಇಂದಬೆಟ್ಟು ನಿವಾಸಿ ಬೌತೀಸ್ ಪಿಂಟೊ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ದೇಹದಾನ ನೋಂದಣಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ವಸಂತ ಪೂಜಾರಿ ಮತ್ತು ಸುಶೀಲ ಹೆಗ್ಡೆ

Suddi Udaya

ಉಜಿರೆ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದ ಚಿನ್ನಯ್ಯ ಚಿನ್ನಯ್ಯನನ್ನು ಕರೆತಂದು ಎಸ್.ಐ.ಟಿ ಅಧಿಕಾರಿಗಳ ಮಹಜರು

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಬೆಳ್ತಂಗಡಿ: ಭಜನಾ ಪರಿಷತ್ತಿನ ಸಮಾಲೋಚನಾ ಸಭೆ

Suddi Udaya
error: Content is protected !!