September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಭಜನಾ ಪರಿಷತ್ತಿನ ಸಮಾಲೋಚನಾ ಸಭೆ

ಬೆಳ್ತಂಗಡಿ : ಭಜನಾ ಪರಿಷತ್ತಿನ ಬೆಳ್ತಂಗಡಿ ವಲಯದ ಭಜನಾ ತಂಡಗಳ ಸಮಾಲೋಚನಾ ಸಭೆಯು ಜು.17 ರಂದು ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಭಜನಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಭಜನಾ ಪರಿಷತ್ತಿನ ವಲಯ ಅಧ್ಯಕ್ಷ ಗಣೇಶ್ ಕನ್ನಾಜೆ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್, ವಲಯದ ಮೇಲ್ವಿಚಾರಕರಾದ ಜಿ ರವಿ, ವಲಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾಲೋಚನ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಂದಿನ ಸಭೆಗೆ ವಲಯದ ಎಲ್ಲಾ ಭಜನಾ ಮಂಡಳಿಗಳನ್ನು ಆಮಂತ್ರಿಸಿ ಭಜನಾ ಪರಿಷತ್ತಿನ ವಲಯದಲ್ಲಿ ಪೂರ್ಣ ಪ್ರಮಾಣದ ಸಭೆಯನ್ನು ನಡೆಸಿ ಆ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರು ಸಲಹೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಸ್ವಾಗತಿಸಿ, ಬೆಳ್ತಂಗಡಿ ಎ ವಿಭಾಗದ ಸೇವಾ ಪ್ರತಿನಿಧಿ ಕೇಶವ ಧನ್ಯವಾದವಿತ್ತರು.

Related posts

ವೇಣೂರು ಭಗವಾನ್ ಶ್ರೀ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ: ಮೂಡಬಿದ್ರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಅಳದಂಗಡಿ ಅರಸರ ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ

Suddi Udaya

ಗುರುವಾಯನಕೆರೆ ಯೋಜನೆ ವತಿಯಿಂದ ಪುರಿಯ ಹಾಲಿನ ಡೈರಿ ಗೆ ರೂ. 2 ಲಕ್ಷ ಮೊತ್ತದ ಸಹಾಯಧನ ವಿತರಣೆ

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

Suddi Udaya

ಬಳಂಜ ಬಿಲ್ಲವ ಸಂಘದಲ್ಲಿ, ಮಹಿಳಾ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ

Suddi Udaya
error: Content is protected !!