23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುದ್ರಡ್ಕ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ – ಯುಕೆಜಿ ತರಗತಿಗಳ ಆರಂಭ

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರಡ್ಕದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಸಾರುದ್ದೀನ್ ವಹಿಸಿದ್ದರು. ಗಿಡಕ್ಕೆ ನೀರೆರೆಯುವ ಮೂಲಕ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಹಾಗೂ ವೇದಿಕೆಯಲ್ಲಿದ್ದ ಇತರ ಗಣ್ಯರು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಚೇತನ್ ಕುಮಾರ್ ಸ್ವಾಗತಿಸಿ, ಪ್ರಸ್ತಾಪವನೆ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಪ್ರಮೋದ್ ಬಳ್ಳಮಂಜ, ಸುಧೀರ್ ಶೆಟ್ಟಿ ಬಳ್ಳಮಂಜ, ಸಿಆರ್‌ಪಿ ಚೇತನಾ, ಪುರುಷೋತ್ತಮ್ ಶೆಟ್ಟಿ, ಶಿವರಾಮ ಆಚಾರ್ಯ, ಹೈದರ್ ಪೈಝಿ, ಸಮದ್ ಮೈಸೂರು, ಸುಲೈಮಾನ್ ಕುದ್ರಡ್ಕ, ಲತೀಫ್ ಕುದ್ರಡ್ಕ, ನಿಸಾರ್ ಕುದ್ರಡ್ಕ, ಮುತ್ತಪ್ಪ ಪೂಜಾರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕಿ ಸ್ವಾತಿ ಹಾಗೂ ಸುಮತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಸಮೀನಾ ಧನ್ಯವಾದವಿತ್ತರು.
ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಯಿತು.

Related posts

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya

ಮಾ.29-ಎ.6: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ – ಪತ್ರಿಕಾಗೋಷ್ಠಿ

Suddi Udaya

ಮರೋಡಿ ಗ್ರಾ.ಪಂ. ಮಾಜಿ ಸದಸ್ಯ ಗಂಗಯ್ಯ ಪೂಜಾರಿ ನಿಧನ

Suddi Udaya

ಬಳಂಜ: ಮುಂದುವರಿದ ಭಾರಿ ಮಳೆ,ಅಟ್ಲಾಜೆ-ಬದಿನಡೆ,ಪೊಯ್ಯೆಗುಡ್ಡೆ ಮಣ್ಣಿನ ರಸ್ತೆ ಕೆಸರುಮಯ: ಸಾರ್ವಜನಿಕರು ನಡೆಯಲಾಗದ ಪರಿಸ್ಥಿತಿ ನಿರ್ಮಾಣ,ಶೀಘ್ರ ದುರಸ್ಥಿಗೆ ಒತ್ತಾಯ

Suddi Udaya

ಮರೋಡಿ: ಜ.27 ರಂದು ಅಂಬ್ಯುಲೆನ್ಸ್ ಲೋಕಾರ್ಪಣೆ

Suddi Udaya
error: Content is protected !!