July 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಿ. ವೋಕ್ ಡಿಜಿಟಲ್ ಮೀಡಿಯಾ ಫಿಲ್ಮ್ ಮೇಕಿಂಗ್ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಜಿರೆ: “ಶಿಕ್ಷಣ ಪಡೆಯಲು ಇಂದು ವಿಪುಲ ಅವಕಾಶಗಳಿವೆ. ನೀವು ಯಾವುದೇ ಪದವಿ ಅಥವಾ ಕೋರ್ಸ್ ಆಯ್ಕೆ ಮಾಡಿದರೂ, ಅದನ್ನು ಪ್ರೀತಿಸಿ. ಯಾರದೋ ಒತ್ತಾಯಕ್ಕೆ ಮಣಿದು ಏನನ್ನೂ ಮಾಡಲು ಹೋಗಬೇಡಿ. ಆಸಕ್ತಿಯ ಕ್ಷೇತ್ರವನ್ನು ಆರಿಸಿ. ಆರಿಸಿದ ಕ್ಷೇತ್ರವನ್ನು ಪ್ರೀತಿಸಿ” ಎಂದು ಉಡುಪಿಯ ಕಂಡೀರಾ ಸಾಮಾಜಿಕ ಜಾಲತಾಣ ಪುಟದ ರೂವಾರಿ ಮಂಜುನಾಥ ಕಾಮತ್ ಹೇಳಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಡಿಜಿಟಲ್ ಜಗತ್ತಿನಲ್ಲಿ ಎಲ್ಲರಿಗೂ ವೃತ್ತಿಪರರಾಗಲು ಸಾಧ್ಯವಿದೆ. ಆದರೆ ಅಲ್ಲಿ ಇರಲು ನಿಮ್ಮಲ್ಲಿ ಕೌಶಲ್ಯಗಳು ಇರಬೇಕು. ಆ ಕೌಶಲ್ಯಗಳನ್ನು ವಿದ್ಯಾರ್ಥಿಯಾಗಿಯೇ ರೂಢಿಸಿಕೊಂಡರೆ ವೃತ್ತಿ ಜೀವನಕ್ಕೆ ಕಾಲಿಡುವಾಗ ಸುಲಭವಾಗುತ್ತದೆ. ನಾನು ಪತ್ರಿಕೋದ್ಯಮ ಓದುವ ದಿನಗಳಿಂದಲೇ ಮಾಧ್ಯಮದ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಲ್ಲಿ ತೊಡಗಿಸಿಕೊಂಡಿದ್ದರಿಂದ ಇಂದು ಡಿಜಿಟಲ್ ಮಾಧ್ಯಮದಲ್ಲೂ ಯಶಸ್ವಿಯಾಗಲು ಸಾಧ್ಯವಾಯಿತು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, “ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಷ್ಟು ಅವರ ವ್ಯಕ್ತಿತ್ವ ವಿಕಸನ ಸಾಧ್ಯ. ಇದಕ್ಕಾಗಿ ಬೇಕಾದಂತೆ ವಿದ್ಯಾರ್ಥಿ ಸಂಘಗಳು ರೂಪುಗೊಳ್ಳಬೇಕು. ತಂತಮ್ಮ ಕೌಶಲ್ಯಗಳನ್ನು ಪ್ರಸ್ತುತಪಡಿಸಲು ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಸಬೇಕು” ಎಂದರು.

ಸಹಾಯಕ ಪ್ರಾಧ್ಯಾಪಕ ಇಂದುಧರ ಕಿಣಿ ಲೂಮೋಸ್ ವಿದ್ಯಾರ್ಥಿ ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಲುಮೋಸ್ ವಿದ್ಯಾರ್ಥಿ ಸಂಘದ 2026-27ನೇ ಸಾಲಿನ ಅಧ್ಯಕ್ಷರಾಗಿ ಸಿಂಚನ, ಕಾರ್ಯದರ್ಶಿಯಾಗಿ ಆದಿತ್ಯ ಮಾಡಳ್ಳಿ, ದ್ವಿತೀಯ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಯಾಗಿ ಹೇಮಲತಾ ಮತ್ತು ಸಿಂಧು ಪ್ರಮಾಣವಚನ ಸ್ವೀಕರಿಸಿದರು.

ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಂಕಿತ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಸ್ಪರ್ಧಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿ ಅದ್ವಿತಿ ವಂದಿಸಿದರು.

Related posts

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ ಚಾಂಪಿಯನ್

Suddi Udaya

ಬಳಂಜ: ನಮ್ಮ ಮಣ್ಣು ನಮ್ಮ ದೇಶ ಧ್ಯೇಯದೊಂದಿಗೆ ದೆಹಲಿಯಲ್ಲಿ ನಿರ್ಮಾಣಗೊಳ್ಳುವ ಹುತಾತ್ಮರ ಸ್ಮಾರಕಕ್ಕೆ ಬಳಂಜ ಗ್ರಾ.ಪಂ ಮುಖೇನಾ ಮಣ್ಣು ಹಸ್ತಾಂತರ

Suddi Udaya

ಕಿಲ್ಲೂರು ಮಾರಿಗುಡಿ ಯುವ ಕೇಸರಿ ಗೆಳೆಯರ ಬಳಗ ಆಶ್ರಯದಲ್ಲಿ ಹೊನಲು ಬೆಳಕಿನ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಬಾಲಕಿಯರ ಮ್ಯಾಟ್‌ ಕಬಡ್ಡಿ ಪಂದ್ಯಾಟ

Suddi Udaya

ಪಟ್ಟೂರು ಕಾನೂನು ಬಾಹಿರ ಮನೆ ಜಪ್ತಿ : ತಪ್ಪಿತಸ್ತ ಅಧಿಕಾರಿ ಮೇಲೆ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಆಗ್ರಹ: ನೂತನ ಡಿವೈಎಸ್‌ಪಿ ಜೊತೆ ಮುಸ್ಲಿಂ ಮುಖಂಡರ ಮಾತುಕತೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಜಿನಾಭಜನಾ ಸ್ಪರ್ಧೆಗೆ ಆಯ್ಕೆ

Suddi Udaya

ಶುಭಾವಿವಾಹ ಧನಂಜಯಮತ್ತುಶೋಭಾ

Suddi Udaya
error: Content is protected !!