23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತಣ್ಣೀರುಪಂತ: ಪಾಲೇದುವಿನ ಡಾ. ಸ್ವಾತಿಕ್‌ರಿಗೆ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪದವಿ

ಬೆಳ್ತಂಗಡಿ: ಕೂಲಿ ಕಾರ್ಮಿಕೆಯ ಪುತ್ರ ಡಾ. ಸ್ವಾತಿಕ್ ಪಿ.ಟಿ. ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪದವಿ ಪಡೆದು ಸಾಧನೆಗೈದಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಪಾಲೇದು ಸಮೀಪದ ಕೊಲ್ಯೆತ್ಯಾರು ನಿವಾಸಿ ಉಷಾ-ಪುರುಷೋತ್ತಮ ಪೂಜಾರಿ ದಂಪತಿಗಳ ಕಿರಿಯ ಪುತ್ರ ಡಾ.ಸಾತ್ವಿಕ್ ಪಿ.ಟಿ.

ಬಡಕುಟುಂಬದವಾರಗಿದ್ದು ಆರ್ಥಿಕ ಸಂಕಷ್ಟದ ನಡುವೆಯೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸ್ಪೂರ್ತಿಯಾಗಿದ್ದಾರೆ. ಅದರಲ್ಲೂ ನ್ಯೂರೋ ಫಿಸಿಯೋಥೆರಪಿ ವಿಷಯದಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಪಾಲೇದುವಿನಲ್ಲಿ, ಪ್ರೌಢ ಶಿಕ್ಷಣವನ್ನು ಮೊರಾರ್ಜಿ ದೇಸಾಯಿ ಮಚ್ಚಿನ, ಪುಂಜಾಲಕಟ್ಟೆ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ನಡೆಸಿ ಹಾಗೂ ಉನ್ನತ ಶಿಕ್ಷಣವನ್ನು ಲಕ್ಷ್ಮೀ ಕಾಲೇಜಿನಲ್ಲಿ ಪೂರೈಸಿದ್ದಾರೆ.

ತಾಯಿ-ತಂದೆ ಕೂಲಿ ಕಾರ್ಮಿಕರಾಗಿದ್ದು ಮಗನ ಭವಿಷ್ಯಕ್ಕೆ ತಾಯಿ ಉಷಾ ಆಸರೆಯಾಗಿ ನಿಂತು, ಮನೆಯ ಆರ್ಥಿಕ ಸಂಕಷ್ಟದ ನಡುವೆ ತಾನು ಕಲಿಯದಿದ್ದರೂ ತನ್ನ ಮಗ ವಿದ್ಯಾರ್ಜನೆಯಿಂದ ವಂಚಿತರಾಗಬಾರದು ಎಂದು ತನ್ನ ದುಡಿಮೆ ಮೂಲಕ ಮಗನ ಶಿಕ್ಷಣಕ್ಕೆ ಉತ್ತೇಜನ ನೀಡಿ ತಾಯಿಗೆ ಮಗನ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಶಿಕ್ಷಣದ ನಡುವೆ ಬಿಡುವಿನ ಸಮಯ ಇತರ ಕೆಲಸಕ್ಕೆ ಹೋಗಿ, ಸಾಧನೆಯ ಛಲ ಮತ್ತು ಸರ್ಕಾರಿ ಹಾಗೂ ಖಾಸಗಿ ವಿದ್ಯಾರ್ಥಿವೇತನಗಳ ಹಾಗೂ ಆಪ್ತರ ನೆರವಿನಿಂದ ಹಾಗೂ ನನ್ನ ತಾಯಿಯ ದೊಡ್ಡ ಕೊಡುಗೆಯಿಂದ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪದವಿ ಗಳಿಸಲು ಸಹಕಾರಿಯಾಗಿದೆ, ಮುಂದೆ ಒಂದು ವರ್ಷ ಕೆಲಸ ಮಾಡಿ ಬಳಿಕ ಆರ್ಥೋಪೆಡಿಕ್ ಪಿಸಿಯೋಥೆರಪಿಯಲ್ಲಿ ಸಾತ್ನಕೊತ್ತರ ಪದವಿ ಪಡೆಬೇಕೆಂಬ ಆಕ್ಷಾಂಕ್ಷೆ ಇದೆ ಎನ್ನುತ್ತಾರೆ ಡಾ.ಸಾತ್ವಿಕ್ ಪಿ.ಟಿ.

Related posts

ಸಂಬೋಳ್ಯದ ಮೃತ ಬಾಲಕ ಸುಮಂತ್ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ

Suddi Udaya

ಡೇವಿಡ್ ಜೈಮಿ ಕೊಕ್ಕಡ ರವರಿಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ವಿಶ್ವ ದಾಖಲೆ

Suddi Udaya

ಜೂ.8:ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Suddi Udaya

ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಾದ ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಸದಸ್ಯರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ: ವಿದ್ವತ್ ಕ್ಲಾಸ್ ಕನೆಕ್ಟ್ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

Suddi Udaya
error: Content is protected !!