25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿ ವತಿಯಿಂದ ವಾರ್ಷಿಕ ಮಹಾಸಭೆ; ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ , ಸನ್ಮಾನ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ವಿವಿಧ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿ ಯ ವಾರ್ಷಿಕ ಮಹಾಸಭೆ, ಹಾಗೂ ಕಣಿಯೂರು ಗ್ರಾಮದ ಬಂಟ ಸಮಾಜದ ಎಸ್ ಎಸ್ ಎಲ್ ಸಿ, ಪಿ ಯು ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸನ್ಮಾನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜು.5 ರಂದು ಪದ್ಮುಂಜ ರೈತ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಆನಂದ ಎನ್ ಶೆಟ್ಟಿ ಪನೆಕ್ಕರ, ಉದ್ಯಮಿಗಳು ಬೆಳಗಾವಿ ಉದ್ಘಾಟಿಸಿದರು. ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಅಂಬಡ್ಕ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ನಿವೃತ್ತ ಪ್ರಾoಶುಪಾಲ ರವೀಂದ್ರ ದರ್ಬೆ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಕಣಿಯೂರು ವಲಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ಶ್ರೀಮತಿ ಅನಸೂಯಾ ಶಂಭು ರೈ ಮೊರಂತಾಜೆ, ಕಣಿಯೂರು ಗ್ರಾಮ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ಮೇಲಾoಟ, ಬೆಳ್ತಂಗಡಿ ಬಂಟರ ಸಂಘದ ನಿರ್ದೇಶಕ ಪುರಂದರ ಶೆಟ್ಟಿ ಪಣೆಕ್ಕರ, ಕಣಿಯೂರು ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಣಿಯೂರು ಗ್ರಾಮದ ನಿವಾಸಿಗಳಾಗಿದ್ದು ಪ್ರಸ್ತುತ ಬೆಳಗಾವಿಯಲ್ಲಿ ಉದ್ಯಮಿಯಾಗಿ ಅನೇಕರಿಗೆ ಉದ್ಯೋಗ ನೀಡಿದ ಆನಂದ ಎನ್ ಶೆಟ್ಟಿ ಪಣೆಕ್ಕರ, ಶಿಕ್ಷಣ ಕ್ಷೇತ್ರ ದ ಸಾಧನೆಗಾಗಿ ಸುಜಾತ ಶೆಟ್ಟಿ ಮೊಗರೋಡಿ ( ಪಿ ಆರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ), ಚಾರ್ಟರ್ಡ್ ಅಕೌಂಟೆಂಟ್ ರಕ್ಷಿತ್ ಶೆಟ್ಟಿ ಅಂತರ, SKDRDP ಪ್ರಾದೇಶಿಕ ನಿರ್ದೇಶಕಿ ದಯಾಶೀಲಾ ಆಳ್ವ, ಹಾಗೂ ಪದ್ಮುಂಜ ಮಿಲ್ಕ್ ಸೊಸೈಟಿ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಸತೀಶ್ ಕುಮಾರ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವಿಲಾಸ್ ಶೆಟ್ಟಿ ಪುಣ್ಕೆದಡಿ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗೀತಾ ಸುನಿಲ್ ಶೆಟ್ಟಿ ಪುದ್ದೋಟ್ಟು ನೆರವೇರಿಸಿಕೊಟ್ಟರು, ಪ್ರಾರ್ಥನೆಯನ್ನು ಸಂಘದ ಮಹಿಳಾ ಪದಾಧಿಕಾರಿಗಳು ನಡೆಸಿಕೊಟ್ಟರು. ಮಹಾಸಭೆಯ ವಾರ್ಷಿಕ ವರದಿಯನ್ನು ಕಣಿಯೂರು ಗ್ರಾಮ ಸಮಿತಿ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಕೆರೆಕೋಡಿ ವಾಚಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ವಕೀಲರು, ಗ್ರಾಮ ಸಮಿತಿ ಉಪಾಧ್ಯಕ್ಷ ಯತೀಶ್ ಶೆಟ್ಟಿ ಪಣೆಕ್ಕರ ನಡೆಸಿಕೊಟ್ಟರು.

Related posts

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ

Suddi Udaya

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿನಿಯೋಗಿಸಿರುವ ಅನುದಾನವೆಷ್ಟು,? ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ರವರ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಬಸದಿಯಲ್ಲಿ ನಮೋಕಾರ ಮಹಾಮಂತ್ರ ಪಠಣ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಗಾಗಿ ರೊಬೋಟ್ “ಶ್ರುತಿ” ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮ

Suddi Udaya

ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಾ ಮೇಲೆ ಕಾಡುಕೋಣ ದಾಳಿ: ರಿಕ್ಷಾದಲ್ಲಿದ್ದ ಪುತ್ರ ದಿಲ್ಸನ್ ಗೆ ಗಾಯ ತಂದೆ ಡೆನ್ನಿಸ್ ಅಪಾಯದಿಂದ ಪಾರು

Suddi Udaya
error: Content is protected !!