25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸವಣಾಲು ಅ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಸಮಾರಂಭ ಹಾಗೂ ವಿದ್ಯಾರ್ಥಿ ಸಂಘಗಳ ಉದ್ಘಾಟನೆ

ಸವಣಾಲು : 2026- 27 ನೇ ಶೈಕ್ಷಣಿಕ ವರ್ಷದ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಜು. 6ರಂದು ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉದ್ಘಾಟಕರಾಗಿ ಗ್ರಾಮ ಪಂಚಾಯಿತಿ ಮೇಲಂತಬೆಟ್ಟು ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಅವರು ಪ್ರಮಾಣ ವಚನ ಬೋಧಿಸಿ ಮಾತನಾಡಿ ಸಹಪಠ್ಯ ಚಟುವಟಿಕೆಗಳು, ಮಕ್ಕಳಲ್ಲಿ ನಾಯಕತ್ವ ಗುಣ, ಹೊಂದಾಣಿಕೆಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇದು ಕಲಿಕೆಗೆ ಪ್ರೇರಣೆಯನ್ನು ನೀಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ರೈಯವರು ವಹಿಸಿದ್ದರು. ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ತವ್ಯ ಬೋಧನೆಯನ್ನು ಶಾಲಾಡಳಿತ ಸಮಿತಿಯ ಸದಸ್ಯ ಶಿವಪ್ರಸಾದ್ ಬೋಧಿಸಿದರು. ಶಾಲಾ ಶಿಕ್ಷಕಿಯಾದ ಶ್ರೀಮತಿ ಮಮತಾ. ಎಸ್ ಸ್ವಾಗತಿಸಿದರು. ಶಿಕ್ಷಕಿ ಕುl ಸುಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಸೌಮ್ಯ ಧನ್ಯವಾದ ನೀಡಿದರು. ಶಿಕ್ಷಕಿಯರಾದ ಸುಜಾತ ಮತ್ತು ವೈಶಾಲಿ ಕಾರ್ಯಕ್ರಮಕ್ಕೆ ಸಹಕರಿಸಿ ಯಶಸ್ವಿಗೊಳಿಸಿದರು.

Related posts

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ, ಮಹಾರಥೋತ್ಸವ

Suddi Udaya

ಇಂದಬೆಟ್ಟು : ಶ್ರೀ ಧರ್ಮಸ್ಥಳ ಶೌರ್ಯ ಘಟಕ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ನಾವೂರು ದುರ್ಗಾ ಮೇಲೋಡಿಸ್ 100ನೇ ಸಂಚಿಕೆಯ ಆಮಂತ್ರಣ ಪತ್ರಿಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಗೌರವಾರ್ಪಣೆ : 3ನೇ ವರ್ಷದ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗರ್ಡಾಡಿ ಯುವಕ ಮಂಡಲ ವತಿಯಿಂದ 34ನೇ ವರ್ಷದ ಮೊಸರು ಕುಡಿಕೆ ಉತ್ಸವ: ಅಧ್ಯಕ್ಷರಾಗಿ ಹರೀಶ್ ಪೂಜಾರಿ ಬರಮೇಲು

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya
error: Content is protected !!