25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥೇಶ್ವರ ಅಂಗಮಾಧ್ಯಮ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯಸ್ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಮಕ್ಕಳಿಗೆ ವಿಷಯಾಧಾರಿತ ಪಾಠ ಹೇಳಿ ಕೊಡಬೇಕೇ ಹೊರತು ವಿಷಾಧಾರಿತ ವಿಷಯಗಳನ್ನು ಹೇಳಿಕೊಡಬಾರದು.ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮಕ್ಕಳಿಗೆ ಹೇಗೆ ಹಾಗೂ ಯಾಕೆ ಹೇಳಿ ಕೊಡಬೇಕು. ಹೆತ್ತವರು ಹೇಗೆ ಮಾದರಿ ಆಗಿರಬೇಕು, ವಿದ್ಯಾಭ್ಯಾಸ ಮನಸ್ಸು ಹಾಗೂ ಹೃದಯದಲ್ಲಿ ಜಾಗೃತಿ ಮೂಡಿಸಬೇಕು,ತಂದೆ ತಾಯಿಯ ಗುಣ ಮಕ್ಕಳಲ್ಲಿ ಫಲ ಕೊಡುತ್ತದೆ ಎಂಬಿತ್ಯಾದಿಹತ್ತು ಹಲವು ವಿಚಾರಗಳನ್ನು ಉದಾಹರಣೆ, ನಿದರ್ಶನ ಹಾಗೂ ಪಂಚತಂತ್ರ ,ವೇದ ಇತ್ಯಾದಿಗಳ ವಿಚಾರಧಾರೆಯ ಜೊತೆಗೆ ವಿವರಿಸಿದರು.
ಶಾಲಾ ಸಹ ಶಿಕ್ಷಕಿ ಶ್ರೀಮತಿ ಕಾವ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಹೆತ್ತವರು ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

Related posts

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ

Suddi Udaya

ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆಗೆ ಶೀಘ್ರವೇ ಶಿಲಾನ್ಯಾಸ: ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆ ದುರಸ್ತಿಗೆ 7 ಬಾರಿ ಸರಕಾರಕ್ಕೆ ಮನವಿ: ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ

Suddi Udaya

ಉಜಿರೆ: ಮುಂಡತ್ತೋಡಿ – ಪೆರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಕೊಡೆ ವಿತರಣೆ

Suddi Udaya

ಉಜಿರೆ :”ಸಮಾ‍ಜದಲ್ಲಿ ಮನಶ್ಶಾಸ್ತ್ರಜ್ಞರ ಪಾತ್ರ ಮತ್ತು ಸಾಮಾಜಿಕ ಕಾಳಜಿ” ವಿಷಯದ ಕುರಿತು ಸೆಮಿನಾರ್

Suddi Udaya
error: Content is protected !!