25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಆಟಿ ತಿಂಗಳ ತಿನಿಸುಗಳೊಂದಿಗೆ “ಆಟಿದ ಕೂಟ” ನಾಟಿ ವೈದ್ಯರಿಗೆ ಸನ್ಮಾನ

ಉಜಿರೆ: ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘ ಉಜಿರೆ ಇವರ ವತಿಯಿಂದ ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ನಡೆದ “ಆಟಿಕೂಟ” ಕಾರ್ಯಕ್ರಮವು ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳು ಹಾಗೂ ನಾಟಿ ವೈದ್ಯ ರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಟಿ ವೈದ್ಯ ರಾದ ಶ್ರೀನಿವಾಸ ಪೂಜಾರಿ ಪೆರ್ಮುದೆ, ಕೊಯ್ಯೂರು ಭಾಗವಹಿಸಿ, ಆಟಿ ತಿಂಗಳ ತಿನಿಸುಗಳು ಮತ್ತು ನಾಟಿ ಜೀವನದ ಮಹತ್ವದ ಕುರಿತು ಮಾತನಾಡಿದರು. ಆಟಿ ತಿಂಗಳಲ್ಲಿ ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ವಿವರಿಸಿದ ಅವರು, ಪೌಷ್ಟಿಕಾಂಶಯುಕ್ತ ಸಾಂಪ್ರದಾಯಿಕ ಆಹಾರಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಆಸರೆ ಸದಸ್ಯರು ತಯಾರಿಸಿ ತಂದ ವಿವಿಧ ಬಗೆಯ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ಸವಿದು ಸಂಭ್ರಮಿಸಿದರು. ಆಟಿ ತಿಂಗಳ ಆಚರಣೆಗಳ ಹಿಂದಿರುವ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮಹತ್ವದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.

ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಕೆ. ಕರುಣಾಕರ ಜೈನ್ ಶ್ರೀಮತಿ ಅನಸೂಯಾ ರೈ ಹಾಗೂ ಸುರೇಶ್ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಸರೆ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕುದ್ಯಾಡಿ ಸ್ಬಾಗತಿಸಿ, ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮ ವನ್ನು ಗೌತಮ್ ಕುಕ್ಕಾನ್ ನಿರ್ವಹಿಸಿದರು.

Related posts

ಉಜಿರೆ ರಾಮಚಂದ್ರ ಕಾಮತ್ ನಿಧನ

Suddi Udaya

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ: ಕಲ್ಕಣಿಯಲ್ಲಿ ಧರೆಗುರುಳಿದ ತೆಂಗಿನ ಮರ, ವಿದ್ಯುತ್ ತಂತಿಗೆ ಬಿದ್ದು ಹಾನಿ

Suddi Udaya

ಅರಸಿನಮಕ್ಕಿ ಜನಸ್ಪಂದನ ಸಭೆ: ಕೊಕ್ಕಡದಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ

Suddi Udaya

ಕಡಿರುದ್ಯಾವರ: ಸ್ಥಳೀಯರಿಂದ ಶ್ರಮದಾನದ ಮೂಲಕ ರಸ್ತೆ ಸಮತಟ್ಟು

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೌರ ಯುಗಾದಿ ವಿಷು ಆಚರಣೆ

Suddi Udaya
error: Content is protected !!