25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿಜಯ ರತ್ನ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಗೆ ಒಲಿದ ವಿದ್ಯಾಸಿರಿ ಗೌರವ

ಗುರುವಾಯನಕೆರೆ: ಕಳೆದ ವರ್ಷ ವಿಜಯವಾಣಿ ದಿನಪತ್ರಿಕೆಯು ಎಕ್ಸೆಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ಅವರಿಗೆ ವಿಜಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ ನೆನಪುಗಳು ಇನ್ನು ಹಸಿರಾಗಿರುವಾಗಲೇ ಮತ್ತೊಂದು ಪ್ರಶಸ್ತಿಯ ಗರಿ ಮೂಡಿರುವುದು ಎಲ್ಲೆಡೆ ಸಂತಸಕ್ಕೆ ಕಾರಣವಾಗಿದೆ.

ಮಂಗಳೂರಿನ ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯು ಸುಮಂತ್ ಕುಮಾರ್ ಜೈನ್ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ 2026 ನೇ ಸಾಲಿನ ವಿದ್ಯಾ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸರವರು ಎಕ್ಸೆಲ್ ಸಂಸ್ಥೆಗೆ ಬಂದು ಸುಮಂತ್ ಕುಮಾರ್ ಜೈನ್ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

“ಕರ್ನಾಟಕದಲ್ಲಿ ಕೇವಲ ಇಬ್ಬರು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು ಅದರಲ್ಲಿ ಒಬ್ಬರು ಸುಮಂತ್ ಕುಮಾರ್ ಜೈನ್ ಎಂಬುದು ಅತ್ಯಂತ ವಿಶೇಷ. ಶೈಕ್ಷಣಿಕ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ” ಎಂದು ಶ್ರೀನಿವಾಸ್ ರವರು ಹೇಳಿದರು.

“ಪ್ರಶಸ್ತಿಗಳು ತಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತಿರುವವರು ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಮತ್ತು ಬೋಧಕೇತನ ಸಿಬ್ಬಂದಿಯವರು. ಎಲ್ಲರ ಸಹಕಾರದಿಂದ ನಾನು ಮತ್ತಷ್ಟು ನಿಸ್ವಾರ್ಥ ಸೇವೆಯನ್ನು ಮಾಡುತ್ತೇನೆ” ಎಂದು ಪ್ರಶಸ್ತಿಯನ್ನು ಸ್ವೀಕರಿಸಿದ ಸುಮಂತ್ ಕುಮಾರ್ ಜೈನ್ ಭರವಸೆಯ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ರಾಜೇಂದ್ರ ಭಟ್, ಪ್ರಾಚಾರ್ಯರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್ ಉಪಪ್ರಾಚಾರ್ಯರ ರೋಹಿತ್ ಕುಮಾರ್ ಮತ್ತು ಹರೀಶ್,ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ, ನಿಲಯ ಮೇಲ್ವಿಚಾರಕರಾದ ಮಲ್ಲೇಶ್ ಜೈನ್, ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.

Related posts

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಸಾವ್ಯ ಬಿಜೆಪಿ ಕಾರ್ಯಕರ್ತರಿಂದ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜಾ ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮಾ ಆರ್. ರಾವ್, ಉಪಾಧ್ಯಕ್ಷರಾಗಿ ರಶ್ಮಿ ಪಟವರ್ಧನ್ ಆಯ್ಕೆ

Suddi Udaya

ಕನ್ಯಾಡಿ 2: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ನೆರಿಯ ಪೆಟ್ರೋನೆಟ್ ಎಂ ಎಚ್ ಬಿ ಕಂಪನಿ ವತಿಯಿಂದ ಡಿಜಿಟಲ್ ಪ್ರೊಜೆಕ್ಟರ್ ಕೊಡುಗೆ

Suddi Udaya

ಪದ್ಮುಂಜ: ಸ. ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಆಯ್ಕೆ

Suddi Udaya

ಫೆ.26: ಬೆಳಂಗಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!