23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂದಿನ ತಲೆಮಾರಿನ ಫಾರ್ಮಸಿಸ್ಟ್ ಗಳಿಗೆ ವೃತ್ತಿ ಮಾರ್ಗದರ್ಶನ: ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಪ್ರೇರಣಾದಾಯಕ ಸೆಮಿನಾರ್

ಲಾಯಿಲ: ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿ, ಲಾಯಿಲದಲ್ಲಿ “Inspiring the Next Generation of Pharmacists: Transforming Mindset to Shape Their Future” ಎಂಬ ವಿಷಯದಡಿ ವೃತ್ತಿ ಮಾರ್ಗದರ್ಶನ ಸೆಮಿನಾರ್ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳಲ್ಲಿ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಮೂಡಿಸುವುದು, ನಾಯಕತ್ವ ಗುಣಗಳನ್ನು ಬೆಳೆಸುವುದು ಹಾಗೂ ಫಾರ್ಮಸಿ ಕ್ಷೇತ್ರದಲ್ಲಿನ ಹೊಸ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಳಿಕ ಸಂಪನ್ಮೂಲ ವ್ಯಕ್ತಿಯಾದ ಅಚಾರ್ಯ & ಬಿ.ಎಂ. ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ, ಬೆಂಗಳೂರಿನ ಪ್ರೊ| ಡಾ. ಉದಯ್ ರಾಜ್ ಶರ್ಮಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಲ್ಲಿಕಾರ್ಜುನ ಗೌಡ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ. ಮಲ್ಲಿಕಾರ್ಜುನ ಗೌಡ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಜ್ಞಾನಕ್ಕೆ ಸೀಮಿತವಾಗದೆ, ಸಂವಹನ ಕೌಶಲ್ಯ, ನಾಯಕತ್ವ, ನೈತಿಕ ಮೌಲ್ಯಗಳು ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇಂತಹ ಮಾರ್ಗದರ್ಶನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿಜೀವನ ನಿರ್ಮಾಣಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಉದಯ್ ರಾಜ್ ಶರ್ಮಾ ಅವರು ತಮ್ಮ ಉಪನ್ಯಾಸದಲ್ಲಿ ಫಾರ್ಮಸಿ ಕ್ಷೇತ್ರದಲ್ಲಿನ ದೇಶಿ-ವಿದೇಶಿ ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣ, ಸಂಶೋಧನೆ, ಔಷಧೋದ್ಯಮ, ಕ್ಲಿನಿಕಲ್ ರಿಸರ್ಚ್, ರೆಗ್ಯುಲೇಟರಿ ಅಫೇರ್ಸ್, ಫಾರ್ಮಕೋವಿಜಿಲೆನ್ಸ್ ಹಾಗೂ ಉದ್ಯಮಶೀಲತೆಯಂತಹ ವಿವಿಧ ವೃತ್ತಿ ಅವಕಾಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಸ್ಪಷ್ಟ ಗುರಿ, ಸಕಾರಾತ್ಮಕ ಮನೋಭಾವ ಹಾಗೂ ನಿರಂತರ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂದು ಅವರು ಪ್ರೇರಣಾದಾಯಕವಾಗಿ ತಿಳಿಸಿದರು.

ಕಾರ್ಯಕ್ರಮವು ಜನನಿ ಮತ್ತು ತಂಡದವರು ಪ್ರಾರ್ಥಿಸಿದರು.ಕಾಲೇಜಿನ ಅಧ್ಯಾಪಕಿ ವಿದ್ಯಾಶ್ರೀ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಆಶ್ರೀನಾ ಹಾಗೂ ಕೀರ್ತನಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಿಯಾಂಕಾ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಇಂದು ( ಫೆ. 19): ಬೆಳ್ತಂಗಡಿಯಲ್ಲಿ ಯುವ ನಾಯಕ ಸಂಪತ್ ಬಿ ಸುವರ್ಣರವರ ಮುಂದಾಳತ್ವದಲ್ಲಿ ಸಾಂಸ್ಕೃತಿಕ ವೈಭವ : ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರದಾನ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಉಪನ್ಯಾಸ

Suddi Udaya

ಕಾಂಗ್ರೆಸ್ ಕರಪತ್ರದಲ್ಲಿ ಯಕ್ಷಗಾನ ವೇಷಧಾರಿಯ ಫೋಟೋ ಬಳಕೆ: ಜಿಲ್ಲಾ ಚುನಾವಣಾಧಿಕಾರಿಗೆ ದೂರು ದಾಖಲು

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಬಂಟ್ವಾಳ ನಗರ ಠಾಣೆಗೆ ಭಡ್ತಿ

Suddi Udaya

ಕನ್ಯಾಡಿ 1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!