24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಔಷಧ ರಹಿತ ಚಿಕಿತ್ಸಾ ಸೇವೆಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ: ಸುಕೇಶ್ ಕುಮಾರ್ ಜೈನ್‌ ರವರಿಗೆ ಗೌರವ

ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲರ್ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಕೇಶ್ ಕುಮಾರ್ ಜೈನ್ ಅವರು ಗ್ರಾಮೀಣ ಹಾಗೂ ನಗರ ಪ್ರದೇಶದ ಅನೇಕ ಜನರಿಗೆ ಔಷಧ ರಹಿತ ಚಿಕಿತ್ಸೆಯ ಮೂಲಕ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದು, ಜನಮನ್ನಣೆ ಗಳಿಸಿದ್ದಾರೆ.

ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್ ಜೈನ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

Related posts

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ವತಿಯಿಂದ ಸದ್ಭಾವನಾ ದಿನ ಆಚರಣೆ

Suddi Udaya

ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಪಡಿತರ ಅಂಗಡಿಗಳ ಮೂಲಕ ಕುಚ್ಚಲು ಅಕ್ಕಿ ವಿತರಿಸುವಂತೆ ಎಸ್‌ಡಿಪಿಐ ವತಿಯಿಂದ ಸಾಂಕೇತಿಕ ಪ್ರತಿಭಟನೆ

Suddi Udaya

ಹಿರಿಯ ಸಹಕಾರಿ ಧುರೀಣ ಮಾಜಿ ಜಿ.ಪಂ. ಉಪಾಧ್ಯಕ್ಷ ನಿರಂಜನ ಬಾವಂತಬೆಟ್ಟು ನಿಧನ

Suddi Udaya

ಗುರುವಾಯನಕೆರೆ: ಎಸ್.ಎಂ.ಎ ವತಿಯಿಂದ ನೂತನ ಮದರಸ ಕಟ್ಟಡ ಉದ್ಘಾಟನೆ

Suddi Udaya

ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಶಿಶಿಲದಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ

Suddi Udaya
error: Content is protected !!