34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಾವುದೇ ನೋಟೀಸು ನೀಡದೆ, ಕಾರಣವಿಲ್ಲದೆ ಏಕಾಏಕಿ ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿರುವುದು ಯಾವ ನ್ಯಾಯ: ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಕೊಡಿ : ಜಯಾನಂದ ಲಾಯಿಲ

ಬೆಳ್ತಂಗಡಿ: ಯಾವುದೇ ಮಾಹಿತಿ ನೀಡದೆ, ನೋಟೀಸು ನೀಡದೆ, ಯಾವುದೇ ಕಾರಣವಿಲ್ಲದೆ ಏಕಾಏಕಿ ಬೆಳ್ತಂಗಡಿ ತಾಲೂಕು ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಿಸಿರುವುದು ಸರಿಯಲ್ಲ, ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ ಆದ್ದರಿಂದ ನಮ್ಮ ಘಟಕಕ್ಕೆ ಭೇಟಿ ನೀಡಿ, ನಮ್ಮ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಸತತ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಅವರು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಿಗೆ ಮನವಿ ಸಲ್ಲಿಸಿದ್ದಾರೆ.

1989ರಿಂದ ನಾನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತಾ ಘಟಕವನ್ನು ಮುನ್ನಡೆಸುತ್ತಾ ಬರುತ್ತಿದ್ದೇನೆ. ಜಿಲ್ಲಾ ಕಚೇರಿಯ ಎಲ್ಲಾ ಆದೇಶಗಳನ್ನು ಚಾಚುತಪ್ಪದೇ ಪಾಲಿಸುತ್ತಾ ಬಂದಿದ್ದೇನೆ. ತಾಲೂಕು, ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಲ್ಲಿ ನಡೆದ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾ ಕಚೇರಿಯ ಆದೇಶದಂತೆ ಸಿಬಂದಿಗಳನ್ನು ನಿಯೋಜಿಸುತ್ತಾ ಬಂದಿರುವ ನನ್ನನ್ನು ಯಾವುದೇ ಕಾರಣ ನೀಡದೆ, ನೋಟೀಸು ನೀಡದೆ, ನಮ್ಮ ಘಟಕದ ಯಾವ ಸಿಬ್ಬಂದಿಗಳಿಗೂ ಗೊತ್ತಿಲ್ಲದೆ, ಇಲ್ಲಿಯವರೆಗೆ ಯಾವುದೇ ಚುನಾವಣಾ ಕರ್ತವ್ಯಕ್ಕೆ ಅಥವಾ ಬಂದೋಬಸ್ತ್ ಕರ್ತವ್ಯಕ್ಕೆ ಬಾರದ ಓರ್ವ ಸಿಬಂದಿಗೆ ತಾವುಗಳು ಪ್ರಭಾರ ಘಟಕಾಧಿಕಾರಿಯನ್ನಾಗಿ ನೇಮಿಸಿರುವುದು ಯಾವ ನ್ಯಾಯ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಅವರಿಗಿಂತ ನಮ್ಮ ಘಟಕದಲ್ಲಿ ಬಹಳಷ್ಟು ಸಿನಿಯರ್ ಅಫೀಸರ‍್ಸ್ ತರಬೇತಿ ಆದ ಸಿಬ್ಬಂದಿಗಳು ಇದ್ದಾರೆ. ಘಟಕ್ಕೆ ಬಾರದೆ ಯಾವ ಆಧಾರದಲ್ಲಿ ಅವರನ್ನು ಆಯ್ಕೆ ಮಾಡಿದ್ದೀರಿ ಎಂಬುದರ ಬಗ್ಗೆ ನನಗೆ ಸ್ವಷ್ಟವಾದ ಮಾಹಿತಿಯನ್ನು ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಅಲ್ಲದೆ ಆಸಕ್ತಿ ಇದ್ದವರು 7 ದಿವಸದ ಒಳಗೆ ಅರ್ಜಿ ಹಾಕಲು ಅವಕಾಶ ನೀಡಿ ಆದೇಶ ಮಾಡಿ, ತಾವು ೭ ದಿವಸಗಳ ಮುಂಚಿತವಾಗಿ ಅವರೊಬ್ಬರಿಂದ ಅರ್ಜಿಯನ್ನು ತರಿಸಿ ಅವರಿಗೆ ಆದೇಶವನ್ನು ಮಾಡಿದ್ದೀರಿ ಇದು ಕಾನೂನು ಬಾಹಿರವಲ್ಲವೇ, ಜು.7ರಂದು ವಾರದ ಕವಾಯಿತಿಗೆ ಬಂದು ಅವರ ಬ್ಯಾಗ್‌ನಿಂದ ಆದೇಶವನ್ನು ಭೋದಕರು ತೆಗೆದುಕೊಂಡು ನನಗೆ ಹೇಳುತ್ತಾರೆ ಅದು ಯಾವ ನ್ಯಾಯ, ನಮ್ಮ ಘಟಕದ 25 ಮಂದಿ ಸಿಬಂದಿಗಳು ಬದಲಾವಣೆ ಮಾಡದಂತೆ ಮನವಿ ನೀಡಿದ್ದರೂ, ಅದರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ, ಆದ್ದರಿಂದ ಮತ್ತೊಮ್ಮೆ ಇದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Related posts

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಅಂಡಿಂಜೆ : ಮಜಲಡ್ಡ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ವಾಲಿಬಾಲ್ ಪಂದ್ಯಾಟ: ಬಂಗಾಡಿ ಸ.ಉ.ಪ್ರಾ. ಶಾಲೆಯ ಬಾಲಕರ ತಂಡವು ದ್ವಿತೀಯ ಸ್ಥಾನ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಂತರಾಷ್ಟ್ರೀಯ ಶೈಕ್ಷಣಿಕ – ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ; ಎಸ್.ಡಿ.ಎಂ ವಿವಿಧ ಸಂಸ್ಥೆಗಳಿಗೆ ಜಪಾನ್ ತಂಡ ಭೇಟಿ

Suddi Udaya
error: Content is protected !!