23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌ಎಮ್‌ಎ: ಉತ್ತಮ ಸಮುದಾಯ ಅಭಿಯಾನ ಪ್ರಯುಕ್ತ ಬೆಳ್ತಂಗಡಿಯಲ್ಲಿ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ

ಬೆಳ್ತಂಗಡಿ: ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ ಎಸ್.ಎಮ್.ಎ ಇದರ ಮುರ ಮತ್ತು ಉಜಿರೆ ರೀಜಿನಲ್ ಸಮಿತಿಗಳ ಜಂಟಿ ಸಮಿತಿ ಉಜಿರೆ ಝೋನಲ್ ವತಿಯಿಂದ ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ “ಖೈರು ಉಮ್ಮ” ಉತ್ತಮ ಸಮುದಾಯ ಅಭಿಯಾನ ಪ್ರಯುಕ್ತ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ ಜು.10 ರಂದು ಜರುಗಿತು.

ಅಧ್ಯಕ್ಷತೆಯನ್ನು ಝೋನಲ್ ಅಧ್ಯಕ್ಷ ವಝೀರ್ ಅಹ್ಮದ್ ಬಂಗಾಡಿ ವಹಿಸಿದ್ದರು. ಉದ್ಘಾಟನೆಯನ್ನು ಎಸ್.ಎಮ್.ಎ ರಾಜ್ಯ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ನೆರವೇರಿಸಿದರು.

ಡಿಬೇಟ್ ನಲ್ಲಿ ‘ಮಾದಕ ವ್ಯಸನಗಳು,‌ಕಾನೂನು ಮತ್ತು ಸೈಬರ್ ಕ್ರೈಂ ಬಗ್ಗೆ ಬೆಳ್ತಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಸಿಖಂದರ್ ಪಾಷಾ, ಆರೋಗ್ಯ ಮತ್ತು ಜೀವನ ಕ್ರಮ ಹಾಗೂ ಆರೋಗ್ಯ ವಿಮೆ ಕುರಿತು ಬೆನಕ ಆಸ್ಪತ್ರೆಯ ಎಂ.ಡಿ ಡಾ. ಗೋಪಾಲಕೃಷ್ಣ, ಕಾನೂನು ಮತ್ತು ಸಮುದಾಯ ವಿಷಯದಲ್ಲಿ ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ ಸಂಪನ್ಮೂಲ ಉಪನ್ಯಾಸ ನೀಡಿದರು.‌ ಬಳಿಕ ಸಭೀಕರೊಂದಿಗೆ ಸಂವಾದ ನಡೆಯಿತು.

ವೇದಿಕೆಯಲ್ಲಿ ಈಸ್ಟ್ ಜಿಲ್ಲಾಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಖರು ಉಮ್ಮ ಅಭಿಯಾನ ಸಂಯೋಜನಾ ಸಮಿತಿ ಚೇರ್ಮೆನ್ ಹಮೀದ್ ನೆಕ್ಕರೆ ಮುಂಡಾಜೆ, ಕೋಶಾಧಿಕಾರಿ ಅಬ್ದುಲ್ಲ ಮಲೆಬೆಟ್ಟು, ಉಜಿರೆ ರೀಜಿನಲ್ ಅಧ್ಯಕ್ಷ ಅಬೂಬಕ್ಕರ್ ಸಮಡೈನ್, ಮುರ ರೀಜಿನಲ್ ಅಧ್ಯಕ್ಷ ಅಬ್ದುಲ್ ಸಮದ್, ಸಂಯೋಜನಾ ಸಮಿತಿ ಉಪಾಧ್ಯಕ್ಷ ಮುಹ್ಯುದ್ದೀನ್ ಉಜಿರೆ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಯೋಜನಾ ಸಮಿತಿ ಜನರಲ್ ಕನ್ವೀನರ್ ಮುಹಮ್ಮದ್ ರಫಿ ಸ್ವಾಗತಿಸಿದರು. ಹಮೀದ್ ಸ‌ಅದಿ ವಂದಿಸಿದರು.

ಸಮುದಾಯದಲ್ಲಿ ನಡೆಯುತ್ತಿರುವ ಅನಾಚಾರ, ದುಂದುವೆಚ್ಚ, ಕಾನೂನು ಬಾಹಿರ ಚಟುವಟಿಕೆಗಳು, ಆತ್ಮಹತ್ಯೆ, ವಿಚ್ಚೇದನ ಘಟನೆಗಳು, ಯುವಜನರಲ್ಲಿ ಮಾದಕ‌ವ್ಯಸನ ಮತ್ತು ಇತರ ಸಮಸ್ಯೆಗಳ‌ ಬಗ್ಗೆ ಧಾರ್ಮಿಕ ಚೌಕಟ್ಟು ಬೋಧನೆ ಹಾಗೂ ಕಾನೂನಿನಲ್ಲಿರುವ ಶಿಕ್ಷೆಗಳು ಎಂಬಿತ್ಯಾದಿ ಬಗ್ಗೆ ಬಹಿರಂಗವಾಗಿ ಚರ್ಚಿಸಲು ರಾಜ್ಯಾಧ್ಯಂತ ಕಳೆದ 6 ತಿಂಗಳುಗಳಿಂದ ಈ ಕಾರ್ಯಕ್ರಮ ಅನುಷ್ಠಾನವಾಗುತ್ತಿದ್ದು ಮಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮದರಸ ಮೆನೇಜ್‌ಮೆಂಟ್ ಸಮಿತಿಗಳ ಒಕ್ಕೂಟವಾದ ಎಸ್.ಎಮ್.ಎ ಈ ಕಾರ್ಯಕ್ರಮಕ್ಕೆ ನೇತೃತ್ವ ನೀಡುತ್ತಿದೆ.

Related posts

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಾಮುಂಡೇಶ್ವರಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಉಜಿರೆ ಎರ್ನೋಡಿಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಉ.ಹಿ.ಪ್ರಾ. ಶಾಲಾ ಬಾಲಕಿಯರ ತಂಡ ದ್ವಿತೀಯ

Suddi Udaya

ಬೆಳ್ತಂಗಡಿ: ಪಂಚಾಯತ್ ಸದಸ್ಯರ ಪೂರ್ವಭಾವಿ ಸಭೆ: ಮಹಾತ್ಮಾ ಗಾಂಧಿಯವರ ‘ಗ್ರಾಮ ಸ್ವರಾಜ್ಯ’ ಕನಸು ಸಾಕಾರಗೊಳಿಸಿದ್ದು ‘ಪಂಚಾಯತ್ ರಾಜ್’ ವ್ಯವಸ್ಥೆ: ರಕ್ಷಿತ್ ಶಿವರಾಂ

Suddi Udaya

ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷಾ ಬಲಿ ಪೂಜೆ

Suddi Udaya
error: Content is protected !!