25.7 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಚ್ಚಲು ಅಕ್ಕಿ ವಿತರಣೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಸ್‌ಡಿಪಿಐ ಸಾಂಕೇತಿಕ ಪ್ರತಿಭಟನೆ

ಬೆಳ್ತಂಗಡಿ : “ನಮ್ಮ ಆಹಾರ – ನಮ್ಮ ಹಕ್ಕು” ಕರಾವಳಿಯ ತಟ್ಟೆಗೆ ಕುಚ್ಚಲು ಬೇಕು ಎಂಬ ಘೋಷಣೆಯೊಂದಿಗೆ ಪಡಿತರ ಅಂಗಡಿಗಳ ಮೂಲಕ ಕುಚ್ಚಲು ಅಕ್ಕಿಯನ್ನು ವಿತರಿಸುವಂತೆ ಆಗ್ರಹಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಇಂದು ಬೆಳ್ತಂಗಡಿ ಕ್ಷೇತ್ರಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಬೆಳ್ತಂಗಡಿ, ಉಜಿರೆ, ಸುನ್ನತ್ ಕೆರೆ, ಪುಂಜಾಲಕಟ್ಟೆ ಹಾಗೂ ಕಲ್ಲೇರಿ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಊರಿನ ನಾಗರಿಕರು ಆಹಾರ ಪದ್ಧತಿಗೆ ಅನುಗುಣವಾಗಿ ಕುಚ್ಚಲು ಅಕ್ಕಿಯನ್ನು ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ, ಬ್ಲಾಕ್ ಹಾಗೂ ಬ್ರಾಂಚ್ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಚಾತುರ್ಮಾಸ್ಯ ವ್ರತದಲ್ಲಿರುವ ಕ‌ನ್ಯಾಡಿ ಶ್ರೀರಾಮ‌ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಉತ್ತರಕನ್ನಡ ಹಲಿಯಾಳ ಕ್ಷೇತ್ರದ ಶಾಸಕ, ಕರ್ನಾಟಕ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ

Suddi Udaya

ಜ. 24- ಫೆ. 2 ರವರಿಗೆ ಕಾಜೂರು ಉರೂಸ್ ಮಹಾ ಸಂಭ್ರಮ : ಜ. 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ; ಫೆ. 2 ಉರೂಸ್ ಸಮಾರೋಪ- ಮಹಾ ಅನ್ನದಾನ

Suddi Udaya

ಶಾಸಕ ಹರೀಶ್ ಪೂಂಜರ‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

Suddi Udaya

ಉಜಿರೆ : ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ವಾರ್ಷಿಕ ಕಾರ್ಯಚುಟುವಟಿಕೆಗಳ ಸಮಾರೋಪ

Suddi Udaya

ರಕ್ತೇಶ್ವರಿಪದವು ಪೌಷ್ಟಿಕಾಹಾರ ಪೋಷಣ್ ಅಭಿಯಾನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ “ಹೆಜ್ಜೆಗೊಂದು ಸ್ಫೂರ್ತಿ” ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya
error: Content is protected !!