27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು: ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮೀಲಾದ್ ಸ್ವಾಗತ ಸಮಿತಿ ರಚನೆ

ನಾವೂರು: ಮುಹಿಯುದ್ದೀನ್ ಜುಮಾ ಮಸೀದಿ, ಮುರ-ನಾವೂರಿನಲ್ಲಿ 2026ನೇ ಸಾಲಿನ ಮೀಲಾದ್ ಸ್ವಾಗತ ಸಮಿತಿಯನ್ನು ಜಮಾಅತ್ ಕಮಿಟಿಯ ಅಧ್ಯಕ್ಷ ಇಬ್ರಾಹಿಂ ಸಿ.ಎಂ. ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಸುಲೇಮಾನ್ ಪಿ.ವೈ., ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ನಾವೂರು, ಕೋಶಾಧಿಕಾರಿಯಾಗಿ ಶಹೀರ್ ನಾವೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತಾಜುದ್ದೀನ್ ಕಿರ್ನಡ್ಕ ಹಾಗೂ ಇಬ್ರಾಹಿಂ ಪಿ.ಎ., ಜೊತೆ ಕಾರ್ಯದರ್ಶಿಗಳಾಗಿ ಈಸಾ ಕೇಳ್ತಾಜೆ ಮತ್ತು ಅಶ್ರಫ್ ಡಿ.ಎಂ. ಅವರನ್ನು ನೇಮಕ ಮಾಡಲಾಯಿತು. ಇವರನ್ನೊಳಗೊಂಡ ಒಟ್ಟು 26 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಪ್ರಸಕ್ತ ಸಾಲಿನ ಮೀಲಾದ್ ಕಾರ್ಯಕ್ರಮ, ನಬಿದಿನ ರ್ಯಾಲಿ ಹಾಗೂ ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹು. ಬಶೀರ್ ಸಅದಿ ಕೆಮ್ಮಾರ ಅವರು ದುಆ ಹಾಗೂ ಆಶೀರ್ವಚನ ನೀಡಿದರು.

ಮುಹಿಯುದ್ದೀನ್ ಜುಮಾ ಮಸೀದಿ ಮುರ-ನಾವೂರಿನ ಪ್ರಧಾನ ಕಾರ್ಯದರ್ಶಿ ಜಲೀಲ್ ಪಡಂಬಿಲ ಸ್ವಾಗತಿಸಿ, ಕಾರ್ಯದರ್ಶಿ ಖಾದರ್ ನಾವೂರು ವಂದಿಸಿದರು.

Related posts

ಮಾ.28: ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ, ಕಾಸರಗೋಡು – ಕರ್ನಾಟಕ ಚುಟುಕು ಕವಿಗೋಷ್ಠಿ

Suddi Udaya

ಬಳಂಜ: ಹೃದಯಾಘಾತದಿಂದ ಜಯಂತ ಮಡಿವಾಳ ನಿಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರ

Suddi Udaya

INICET ಪ್ರವೇಶ ಪರೀಕ್ಷೆ: ಉಜಿರೆಯ ಡಾ|ಶಿವಾನಿಗೆ ದೇಶದಲ್ಲೇ 191ನೇ ರ್ಯಾಂಕ್

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನ 585 ಸೇವಾ ಯೋಜನೆಯ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರ

Suddi Udaya

ಅರಸಿನಮಕ್ಕಿ ಸ.ಪ್ರೌ. ಶಾಲೆ ಹಾಗೂ ಗ್ರಾಮ ಪಂಚಾಯತ್ ನ ಅರಿವು ಕೇಂದ್ರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!