27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ : ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿದ್ಯಾರ್ಥಿ ಸಂಸತ್ತು ಉದ್ಘಾಟನೆ’

ಎಸ್.ಡಿ.ಎಂ ಎನ್ನುವ ಬ್ರಾಂಡ್,ಕಾಲೇಜು ಅದೆಷ್ಟೋ ಪ್ರಜ್ಞಾವಂತ ನಾಗರಿಕರಿಗೆ ಪ್ರೇರಣೆ ಆಗಿದೆ. ವಿದ್ಯಾರ್ಥಿ ಆಗಿ ಎದುರಿಸುವ ಚುನಾವಣೆ, ಅಧಿಕಾರ ಇವೆಲ್ಲ ನಮ್ಮ ಸಾಮಾಜಿಕ ಕಳಕಳಿ ಅರಿವು ಅರಿಯುವ ಸಲುವಾಗಿಯೇ ಆಗಿದೆ. ಹೆತ್ತವರ ತ್ಯಾಗ, ಉತ್ತಮ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಬೆಳವಣಿಗೆ ಆದಾಗಲೇ ಜೀವನ ಸಾರ್ಥಕ. ವಸತಿ ಪದವಿ ಪೂರ್ವ ಕಾಲೇಜು ನೀಡುವ ಎರಡು ವರ್ಷದ ಮೌಲ್ಯ, ಸಂಸ್ಕಾರ ಬದುಕಿನುದ್ದಕ್ಕೂ ಸಹಾಯಕ. ಅಂಕಪಟ್ಟಿ ಕಳೆದುಕೊಂಡರೆ ಮತ್ತೆ ಪಡೆಯಬಹುದು, ನಡತೆ ಕಳೆದುಕೊಂಡರೆ ಮತ್ತೇ ಮರಳಿ ಪಡೆಯಲು ಸಾಧ್ಯವಿಲ್ಲ ನಾಗರೀಕ ಪ್ರಜ್ಞೆಯ ಕೊರತೆ ನೀಗಿಸಲು ಕೆಲವೊಂದು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು, ಒಳ್ಳೆ ಕೆಲಸ, ಕೇಳಿಸಿಕೊಳ್ಳುವ ಗುಣ, ತಾಳ್ಮೆ, ಇವೆಲ್ಲಾ ಯಶಸ್ಸಿನ ಸೂತ್ರ. ಹಾಗಾಗಿ ಕಲಿಕೆ ಜೊತೆಗೆ ಬೆಳೆಸಿಕೊಳ್ಳುವ ನಾಯಕತ್ವ ಗುಣ ಕನಸುಗಳಿಗೆ ರೆಕ್ಕೆ ಪುಕ್ಕ ಹಚ್ಚಿ ಮೇಲೇರಲು ಸ್ವತ: ಪ್ರಯತ್ನ ಪಡಿ, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಎಸ್.ಡಿ.ಎಂ.ಸ್ನಾತಕೋತ್ತರ ಕಾಲೇಜಿನ, ಪತ್ರಿಕೋದ್ಯಮ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಹಂಪೇಶ್ ಹೇಳಿದರು.

ಇವರು ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಸುಪುತ್ರ ಗೌಡ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ಜೀವನ, ಜೊತೆಗೆ ವಸತಿ ನಿಲಯ ಕಾಲೇಜು ನೀಡಿದ ಸಂಸ್ಕಾರದೊಂದಿಗೆ ತಾನು ಬದುಕಿನ ಗುರಿ ತಲುಪಿದ ಅನುಭವಗಳನ್ನು ಹಂಚಿಕೊಂಡರು. ವ್ಯಸನಗಳಿಂದ ದೂರವಿರುವ ಕುರಿತಾಗಿ ಮಾರ್ಗದರ್ಶನ ನೀಡಿದರು. ನಿರಂತರ ಶ್ರಮ ವಹಿಸಿ ಬದುಕಿನಲ್ಲಿ ಕಲಿಕೆಯನ್ನು ಮುಖ್ಯ ಅಂಶವಾಗಿ ತೆಗೆದುಕೊಳ್ಳಿ, ನಿರ್ಲಕ್ಷಸಲ್ಲದೆಂದು ತಿಳಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪವಿತ್ರ ಕುಮಾರ್ ಉಪಸ್ಥಿತರಿದ್ದರು.

ಎಸ್. ಡಿ. ಎಂ ಸಂಸ್ಥೆಯ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಕಾಲೇಜಿನ ಬೋಧಕ ಬೋಧಕೇತರ ಸಿಬಂದಿಗಳು ಉಪಸ್ಥಿತರಿದ್ದರು.

ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಶ್ರೀಮತಿ ಭವ್ಯಶ್ರೀ ನಿರೂಪಿಸಿದರು. ಕಾಲೇಜು ನಾಯಕ ರಿಷಿ ವಂದಿಸಿದರು.

Related posts

ನಡ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿಯ ಪುನರ್ ಪ್ರತಿಷ್ಠಾ ಮಹೋತ್ಸವ: ದೈವರಾಧನೆಯ ಮಹಾ ಸಮ್ಮೇಳನ ಪರ್ವ- 2024, ಸಂಪನ್ನ ಸರಕಾರಕ್ಕೆ ನಿರ್ಣಯ ಮಂಡನೆ

Suddi Udaya

ಬಳಂಜ: ಶ್ರಿಮಾತಾ ನಾಲ್ಕೂರು ಸಂಘಟನೆಯಿಂದ ಬಳಂಜ ಶಾಲೆಗೆ ದೇಣಿಗೆ ಹಸ್ತಾಂತರ

Suddi Udaya

ತೆಂಕಕಾರಂದೂರು ಗ್ರಾಮದಲ್ಲಿ ರಾಜರೋಷವಾಗಿ ತಿರುಗಾಡುತ್ತಿರುವ ಚಿರತೆ: ಜನತೆ ಕಂಗಾಲು

Suddi Udaya

ಮಡಂತ್ಯಾರು ಗ್ರಾ.ಪಂ ನಿಂದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಕರಪತ್ರ ವಿತರಣೆ

Suddi Udaya

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬೆಳ್ತಂಗಡಿ ಬಿಜೆಪಿ ಧರಣಿ

Suddi Udaya
error: Content is protected !!