26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಎಸ್‌ಐಆ‌ರ್ ವೇಳಾಪಟ್ಟಿ ಪರಿಷ್ಕರಣೆ: ಆ.8ರ ತನಕ ವಿಸ್ತರಣೆ

ಬೆಳ್ತಂಗಡಿ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳಾಪಟ್ಟಿ ಯನ್ನು ಪರಿಷ್ಕರಿಸಲಾಗಿದ್ದು, ಜು. 29ರ ಬದಲು ಗಣತಿ ನಮೂನೆಗಳನ್ನು ತುಂಬಲು ಆ. 8ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ಜು. 14ರಂದು ಬರೆದ ಪತ್ರ ಪರಿಗಣಿಸಿ ಭಾರತ ಚುನಾವಣಾ ಆಯೋಗವು ಎಸ್‌ಐಆರ್‌ ವೇಳಾಪಟ್ಟಿ ಪರಿಷ್ಕರಿಸಿದೆ. ಅದರಂತೆ ಗಣತಿ ನಮೂನೆಗಳ ಭರ್ತಿಗೆ 10 ದಿನ, ಕರಡು ಮತದಾರರ ಪಟ್ಟಿ ಪ್ರಕಟನೆಗೆ 12 ದಿನ, ಆಕ್ಷೇಪಣೆ ಸಲ್ಲಿಸಲು 7, ನೋಟಿಸ್ ಹಂತ, ದೂರು, ಆಕ್ಷೇಪಣೆಗಳ ವಿಲೇವಾರಿಗೆ 12 ದಿನ, ಅಂತಿಮ ಮತದಾರರ ಪಟ್ಟಿ ಪ್ರಕಟನೆಗೆ 12ದಿನ ವಿಸ್ತರಣೆ ಆಗಲಿದೆ. ಈ ಹಿಂದೆ ಗಣತಿ ನಮೂನೆಗಳ ವಿತರಣೆಗೆ ಬಿಎಲ್‌ಒಗಳ ಭೇಟಿಗೆ ಜುಲೈ 29 ಕೊನೆ ದಿನವಾಗಿತ್ತು, ಈಗ ಆಗಸ್ಟ್ 8ರವರೆಗೆ ಅವಕಾಶ ಇರಲಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ಆ.5ರ ಬದಲು ಆ.17ಕ್ಕೆ ಆಗಲಿದೆ. ದೂರು, ಆಕ್ಷೇಪಣೆಗಳ ಸಲ್ಲಿಕೆ ಅವಧಿಯನ್ನು ಆಗಸ್ಟ್ 8ರಿಂದ ಸೆ.9ಕ್ಕೆ ಇದ್ದದ್ದನ್ನು ಆಗಸ್ಟ್ 17ರಿಂದ ಸೆ.16 ರವರೆಗೆ ವಿಸ್ತರಿಸಲಾಗಿದೆ.

Related posts

ರೆಖ್ಯದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಸಭೆ

Suddi Udaya

ನಿಡ್ಲೆ: ಸತ್ಯನಾರಾಯಣ ರಾವ್ ರವರ ತೋಟಕ್ಕೆ ನುಗ್ಗಿದ ಕಾಡಾನೆ: ಬಾಳೆ ಗಿಡಗಳಿಗೆ ಹಾನಿ

Suddi Udaya

ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ‘ಖೇಲ್ ಕೂದ್ ಮಹೋತ್ಸವ’

Suddi Udaya

ಬೆಳ್ತಂಗಡಿಯಲ್ಲಿ ಲಯನ್ಸ್ ಯಕ್ಷೋತ್ಸವ: ಧರ್ಮಸ್ಥಳ ಮೇಳದ ಹಿರಿಯ ಕಲಾವಿದರು ಮತ್ತು ಸಿಬ್ಬಂದಿಗಳಿಗೆ ಗೌರವ

Suddi Udaya

ಬೆಂಗಳೂರಿನ ಪ್ರಸಿದ್ದ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ನಡ ಸರಕಾರಿ ಪಿ.ಯು ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!