26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಇದರ ಕಕ್ಕಿಂಜೆ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಜು.16 ರಂದು ಭಿಡೆ ಕಾಂಪ್ಲೆಕ್ಸ್ ಕಕ್ಕಿಂಜೆಯಲ್ಲಿ ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರು ಅತೀ ವಂ. ಜೇಮ್ಸ್ ಪಟ್ಟೇರಿಲ್ ಆಶೀವರ್ಚನ ನೀಡುತ್ತ, ಪರಿಶ್ರಮ, ದೂರ ದೃಷ್ಟಿಯ ಫಲ ಹೊಸ ಶಾಖೆಯ ರೂಪದಲ್ಲಿ ನಿಂತಿದೆ. ಸಂಘವು ವ್ಯವಹಾರ ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಗೆ ಸಂಘ ಕೆಲಸ ಮಾಡುತ್ತಿದೆ. ಬ್ಯಾಂಕ್ ನೀಡುವ ಸಾಲ ಜನರ ಕನಸುಗಳಿಗೆ ಬಲ ನೀಡುತ್ತದೆ. ಸಿಬ್ಬಂದಿಗಳ ನಗುಮುಖದ ಸೇವೆಯೇ ಈ ಸಂಸ್ಥೆಯ ಬೆಳವಣಿಗೆ ಕಾರಣವಾಗಿದೆ. ಬ್ಯಾಂಕ್ ಶಿಕ್ಷಣ ಆರೋಗ್ಯ, ಪರಿಸರ ಸಂರಕ್ಷಣೆ ಸಮಾಜ ಮುಖಿ ಕಾರ್ಯದ ಮೂಲಕ ಜನಪ್ರಿಯವಾಗಲಿದೆ ಎಂದು ಶುಭ ಹಾರೈಸಿದರು.

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ. ಶಾಖೆಯನ್ನು ಉದ್ಘಾಟಿಸಿದರು. ಭದ್ರತಾಕೋಶದ ಉದ್ಘಾಟನೆಯನ್ನು ಸುಮಾ ಜೋಯಿ, ಗಣಕಯಂತ್ರದ ಉದ್ಘಾಟನೆಯನ್ನು ತೋಟತ್ತಾಡಿ ಸೈಂಟ್ ಆಂಟನೀಸ್ ಚರ್ಚ್ನ ಧರ್ಮಗುರು ಸೆಭಾಸ್ಟಿಯನ್ ಚೆಲಕಪಳ್ಳಿಲ್ ನೆರವೇರಿಸಿದರು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಡಾ| ಮುರಳಿಕೃಷ್ಣ ಇರ್ವತ್ರಾಯ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ ರಾವ್, ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಕಟ್ಟಡ ಮಾಲಕ ನಾರಾಯಣ ಭಿಡೆ, ಪ್ರಭಾರ ಶಾಖಾ ವ್ಯವಸ್ಥಾಪಕಿ ಅಲೀನಾ ಇಜೆ, ಬೆಳ್ತಂಗಡಿ ಹಾಗೂ ಸ್ಥಳೀಯ ಧರ್ಮ ಪ್ರಾಂತ್ಯದ ಧರ್ಮಗುರುಗಳು, ಸಂಘದ ಉಪಾಧ್ಯಕ್ಷ ಜಾರ್ಜ್ ಎಮ್.ವಿ, ನಿರ್ದೇಶಕರುಗಳಾದ ಸೆಬಾಸ್ಟಿನ್ ವಿ.ಟಿ., ಬಿಜು ಪಿ.ಪಿ, ಚಾಕೋ ಎನ್.ಕೆ, ಜೈಸನ್ ಪಿ.ಎಸ್, ಬಾಬು ತೋಮಸ್, ಸೋಫಿ ಜೋಸೆಫ್, ಅಂದಾನಿ ಕೆ.ಡಿ, ಸೆಬಾಸ್ಟಿನ್, ಪಿಲೋಮಿನಾ ವಿ, ಅಜಯ್ ಕೆ.ಎ, ಸೆಬಾಸ್ಟಿನ್ ಪಿ.ಟಿ, ಲಾಲಿ ಮಾಣಿ, ನಾಮನಿರ್ದೇಶಕ ದೇವಸ್ಯ ಎಂ.ಪಿ., ಹಾಗೂ ಆಡಳಿತ ಮಂಡಳಿ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಪಿ.ಎ ಪ್ರಸ್ತಾವಿಸಿ ಸ್ವಾಗತಿಸಿದರು. ನಾಮ ನಿರ್ದೇಶಕ ಮಾತುಕುಟ್ಟಿ ಧನ್ಯವಾದ ನೀಡಿದರು.

Related posts

ಶ್ರೀ ಧ.ಮಂ.ಪ.ಪೂ. ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕ ಮನೋಹರ ಶೆಟ್ಟಿಯವರಿಗೆ ಸನ್ಮಾನ

Suddi Udaya

ಶಾಸಕರ ಕಾರ್ಮಿಕ ಪರ ಬದ್ಧತೆ – ಬಿಎಮ್‌ಎಸ್ ಸ್ವಾಗತ; ಅನಿಲ್ ಕುಮಾರ್ ಯು

Suddi Udaya

ಕರಾಟೆ ಸ್ಪರ್ಧೆ: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕಾರ್ಮೆಲ್ ಸಜಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ನವನೀತ್ ಕೊಯ್ಯೂರು ಅವರ ತಂಡ ದ್ವಿತೀಯ ಸ್ಥಾನ

Suddi Udaya

ಕೊಯ್ಯೂರು : ಶ್ರೀ ಮಹಮ್ಮಾಯಿ ಸನ್ನಿಧಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya
error: Content is protected !!