25.1 C
ಪುತ್ತೂರು, ಬೆಳ್ತಂಗಡಿ
October 17, 2026
ಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನೀಟ್-2026ರಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಮೂಡುಬಿದಿರೆ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-2026)ಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.

ಕಾಲೇಜಿನ ವಿದ್ಯಾರ್ಥಿ ನಿಖಿಲ್ ಎಸ್.ಎಸ್. ಅವರು 720ಕ್ಕೆ 650 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ತನ್ಮಯಿ ಎ. ಕೋಟಿ ಅವರು 647 ಅಂಕ, ಚಿನ್ಮಯಿ ಬೆಳ್ಳೂರು 629 ಅಂಕ, ಹೇಮಾ ಯು. ಅವರು 624 ಅಂಕ, ಶ್ಲೋಕ್ ರಾಘವೇಂದ್ರ ರಾವ್ ಅವರು 615 ಅಂಕ, ಈಶ್ವರ ಪುಂಡಲೀಕಪ್ಪ ಕೊಪ್ಪಲ್ 612 ಹಾಗೂ ಮೋಹಿತ್ ವೈ.ಪಿ. ಅವರು 611 ಅಂಕ ಗಳಿಸಿ ಕಾಲೇಜಿನ ಸಾಧನೆಗೆ ಮೆರುಗು ತಂದಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ 600ಕ್ಕೂ ಅಧಿಕ ಅಂಕಗಳನ್ನು 7 ವಿದ್ಯಾರ್ಥಿಗಳು, 550 ಕ್ಕಿಂತ ಹೆಚ್ಚು ಅಂಕಗಳನ್ನು 32 ವಿದ್ಯಾರ್ಥಿಗಳು, 500 ಕ್ಕಿಂತ ಹೆಚ್ಚುಅಂಕಗಳನ್ನು 70ವಿದ್ಯಾರ್ಥಿಗಳು , 450 ಕ್ಕಿಂತ ಹೆಚ್ಚು ಅಂಕಗಳನ್ನು 124 ವಿದ್ಯಾರ್ಥಿಗಳು ಗಳಿಸಿದ್ದಾರೆ. ಒಟ್ಟಾರೆಯಾಗಿ 216 ವಿದ್ಯಾರ್ಥಿಗಳು 400 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ವೈದ್ಯಕೀಯ ಪ್ರವೇಶಕ್ಕೆ ಭರವಸೆಯ ಸಾಧನೆ ಮಾಡಿದ್ದಾರೆ.

ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಎಐಐಎಂಎಸ್ (AIIMS), ಎಎಫ್‌ಎಂಸಿ (AFMC), ಜಿಪ್ಮರ್ (JIPMER) ಸೇರಿದಂತೆ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿರುವುದು ಸಂಸ್ಥೆಯ ಹೆಮ್ಮೆಯ ಪರಂಪರೆಯಾಗಿದೆ. ಅದೇ ಸಂಪ್ರದಾಯವನ್ನು ಮುಂದುವರಿಸಿರುವ ಈ ವರ್ಷದ ನೀಟ್ ಸಾಧಕರೂ ತಮ್ಮ ಅತ್ಯುತ್ತಮ ಅಂಕಗಳ ಮೂಲಕ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಭರವಸೆ ಮೂಡಿಸಿದ್ದು ಅತ್ಯಂತ ಹರ್ಷ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಗಮನಾರ್ಹ ಯಶಸ್ಸಿಗೆ ಅವರ ಪರಿಶ್ರಮ, ಪೋಷಕರ ಪ್ರೋತ್ಸಾಹ, ಅನುಭವಿ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಹಾಗೂ ಎಕ್ಸಲೆಂಟ್ ಪಿಯು ಕಾಲೇಜಿನ ವ್ಯವಸ್ಥಿತ ತರಬೇತಿ ಮತ್ತು ಶಿಸ್ತುಬದ್ಧ ಶೈಕ್ಷಣಿಕ ವಾತಾವರಣವೇ ಪ್ರಮುಖ ಕಾರಣವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.
ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ , ಕಾರ್ಯದರ್ಶಿ ಶ್ರಿಮತಿ ರಶ್ಮಿತಾ ಜೈನ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕರಾದ ಡಾ.ಪ್ರಶಾಂತ್ ಹೆಗ್ಡೆ, ನೀಟ್ ಸಂಯೋಜಕರಾದ ರಾಮಮೂರ್ತ (Ramamurthy), ಪ್ರಾಂಶುಪಾಲರು ಹಾಗೂ ಆಡಳಿತ ನಿರ್ದೇಶಕರುಗಳಾದ ಪುಷ್ಪರಾಜ್ ಹಾಗೂ ಡಾ. ಸಂಪತ್ ಕುಮಾರ್ ಡಿ.ಪಿ.,ಡೀನ್ ಡಾ..ದಯಾನಂದ್ ಉಪಪ್ರಾಂಶುಪಾಲರುಗಳಾದ ಸುನಾದ್ ರಾಜ್, ತೇಜಸ್ವಿ ಭಟ್ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ನೀಟ್-2026ರ ಈ ಅದ್ಭುತ ಫಲಿತಾಂಶವು ಎಕ್ಸಲೆಂಟ್ ಪಿಯು ಕಾಲೇಜಿನ ಗುಣಮಟ್ಟದ ಶಿಕ್ಷಣ, ಗುರಿನಿಷ್ಠ ತರಬೇತಿ ಮತ್ತು ವಿದ್ಯಾರ್ಥಿ-ಕೇಂದ್ರಿತ ಶೈಕ್ಷಣಿಕ ವ್ಯವಸ್ಥೆಗೆ ಮತ್ತೊಂದು ಸ್ಪಷ್ಟ ಸಾಕ್ಷಿಯಾಗಿದೆ.


Related posts

ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya

ಎಸ್‌ಡಿಎಂ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜು ಹಿರಿಯ ವಿದ್ಯಾರ್ಥಿಗಳ ಪುನರ್ ಸಮ್ಮಿಲನ ಕಾರ್ಯಕ್ರಮ

Suddi Udaya

ಉಜಿರೆಯ ಸುಲೋಚನಾ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

Suddi Udaya

ಮಚ್ಚಿನ : ಹಿರಿಯ ದೈವ ನರ್ತಕ ಬೊಮ್ಮಣ್ಣ ನಿಧನ

Suddi Udaya
error: Content is protected !!