25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಸಾರಥಿ ಮೋಟಾರ್ ಲಿಂಕ್ಸ್ -ಹೊಗೆ ತಪಾಸಣಾ ಕೇಂದ್ರ ಶುಭಾರಂಭ

ಉಜಿರೆ : ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿಲ್ಲ. ಕಳೆದ 1೦ ವರ್ಷಗಳಲ್ಲಿ ಉಜಿರೆಯಲ್ಲಿ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚಿದೆ. ಒಂದೊಂದು ಮನೆಯಲ್ಲಿ  2.3  ವಾಹನಗಳಿರುತ್ತವೆ. ವಾಹನಗಳ ಚಾ ಲನಾವ್ಯವಸ್ಥೆಗೆ  ಪೂರಕವಾಗಿ  ಕ್ರಿಯಾಶೀಲ ,ಯುವ ಉದ್ಯಮಿ   ಪ್ರಾಣೇಶ್ ಮೂಡಿತ್ತಾಯ  ಒಳ್ಳೆಯ ಉದ್ದೇಶ ಹಾಗು ಮನಸ್ಸು ಹೊಂದಿ  ಸಾರಥಿಯ ಮತ್ತೊಂದು ಶಾಖೆಯನ್ನು  ಹೊಗೆ  ತಪಾಸಣಾ  ಸೌಲಭ್ಯದೊಂದಿಗೆ ಪ್ರಾರಂಭಿಸುತ್ತಿರುವುದು  ಪರಿಸರದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ  ಯುವಕರಿಗೆ ಮಾದರಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಉದ್ಯಮದಲ್ಲಿ ಯಶಸ್ಸು  ಗಳಿಸಲಿ ಎಂದು ಉಜಿರೆ ಶ್ರೀ ಜನಾರ್ದನ ದೇವ ಸ್ಥಾನದ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.                 

ಅವರು ಆ 31 ರಂದು ಉಜಿರೆಯ ಚಾರ್ಮಾಡಿ  ಮುಖ್ಯ ರಸ್ತೆಯ ಮಾರುತಿ  ಶೋ ರೂಂ  ಮುಂಭಾಗದಲ್ಲಿ  ಸಾರಥಿ ಮೋಟಾರ್ ಲಿಂಕ್ಸ್ ಮತ್ತು  ಹೊಗೆ   ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು.  ಮುಖ್ಯ ಅತಿಥಿ ವೇದಮೂರ್ತಿ ರಾಜಗೋಪಾಲ ಎಡಪಡಿತ್ತಾಯ  ಮಾತನಾಡಿ   ದೈವ ದೇವರ ಅನುಗ್ರಹ,ಹಿ ರಿಯರ ಆಶೀರ್ವಾದ, ಪರಿಶ್ರಮ,ಪ್ರಯತ್ನದ ಛಲದಿಂದ  ಯಶಸ್ಸು ಗಳಿಸಲು ಸಾಧ್ಯ. ಶ್ರದ್ಧೆ,ನಿಷ್ಠೆ,ಭಕ್ತಿ ಇದ್ದರೆ  ಭಗವಂತನ ಪೂರ್ಣಾನುಗ್ರಹದಿಂದ  ಉದ್ಯಮ ಯಶಸ್ವಿಯಾಗುವುದು ಎಂದು ಶುಭ ಹಾರೈಸಿದರು.ಕನಸಿನ ಮನೆ  ಲಕ್ಷ್ಮಿ ಗ್ರೂಪ್  ಮಾಲಕ .ಮೋಹನ ಕುಮಾರ್  ಮಾತನಾಡಿ  ಸ್ವಂತ ಊರಿನಲ್ಲಿ ಉದ್ಯಮ   ಆರಂಭಿಸಿ  ಸಾಧನೆ ಹಾಗೂ ಸಿಬಂದಿಗಳ ಪರಿಶ್ರಮದಿಂದ  ಸಾರ್ವಜನಿಕರಿಗೆ  ಒಳ್ಳೆಯ ಸೇವೆ ನೀಡಿದರೆ ಸಂಸ್ಥೆ ಬೆ ಳೆಯುವುದರಲ್ಲಿ ಸಂದೇಹವಿಲ್ಲ ಎಂದು ಶುಭ ಹಾರೈಸಿದರು. ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.                                                                                 

ಸಾರಥಿಯ ಮಾಲಕ ಪ್ರಾಣೇಶ್ ಮೂಡಿತ್ತಾಯ,ಹಿರಿಯರಾದ ಕೇಶವ ಮೂಡಿತ್ತಾಯ,ಶಾಂತ ಮೂಡಿತ್ತಾಯ  ಮತ್ತು ಸಿಬಂದಿ ವರ್ಗ  ಅತಿಥಿಗಳನ್ನು ಸ್ವಾಗತಿಸಿ,ಸ್ಮರ ಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರ್ವಹಿ ಸಿ ,ವಂದಿಸಿದರು 

Related posts

ನಡ ಸರ್ಕಾರಿ ಪದವಿಪೂರ್ವ ಕಾಲೇಜು: ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮಂಗಳೂರು : ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಆಗಮನ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ರಿಗೆ ಗುಂಪಲಾಜೆ ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಗೌರವಾರ್ಪಣೆ

Suddi Udaya

ಅಳದಂಗಡಿ ಬೆಟ್ಟದ ಬಸದಿ ಭಗವಾನ್ ಶ್ರೀ ಬ್ರಹ್ಮದೇವರ ಬಸದಿ, ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 50 ಲಕ್ಷ ಮತ್ತು ಸವಣಾಲು ಶ್ರೀ ಆದಿನಾಥ ಸ್ವಾಮಿ ಬಸದಿ, ಜೀರ್ಣೋದ್ಧಾರಕ್ಕೆ 9 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ

Suddi Udaya

ಕೆಂಪುಕಲ್ಲು-ಮರಳು ಸಮಸ್ಯೆ, ಟಿಪ್ಪರ್ ಚಾಲಕ-ಮಾಲಕರು ಕಂಗಾಲು

Suddi Udaya
error: Content is protected !!