24.2 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ

ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಪರಿಸರದ ಪಲ್ಗುಣಿ ನದಿ ತಟದ ಹಳ್ಳದಲ್ಲಿ ಕಳೆದ ಕೆಲವು ದಿನಗಳಿಂದ ನೀರು ನಾಯಿಗಳು ಕಂಡು ಬರುತ್ತಿವೆ.

ಇಲ್ಲಿನ ಕೆ. ಸಂಪತ್ ಕುಮಾರ್ ಕೊಂಬ ಎಂಬವರ ಮನೆಯ ಸಮೀಪ ಕೃಷಿ ತೋಟದಲ್ಲಿ ಹರಿಯುವ ಹಳ್ಳದಲ್ಲಿ ಆಗಾಗ ನೀರು ನಾಯಿಗಳು ಕಂಡು ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲೂ ಈ ಸ್ಥಳದಲ್ಲಿ ನೀರು ನಾಯಿಗಳು ಕಂಡುಬಂದಿದ್ದವು.
ಸಮೀಪದಲ್ಲಿ ಹರಿಯುವ ಪಲ್ಗುಣಿ ನದಿಯನ್ನು ಸೇರುವ ಈ ಹಳ್ಳದಲ್ಲಿ ಸುಮಾರು ಹತ್ತಕ್ಕಿಂತ ಅಧಿಕ ನೀರು ನಾಯಿ ಮರಿಗಳು ಆಗಾಗ ಆಟ ಆಡುವುದು ಕಂಡುಬರುತ್ತಿದೆ. ಆದರೆ ದೊಡ್ಡ ನೀರು ನಾಯಿಗಳು ಹಳ್ಳದಲ್ಲಿ ಬರುವುದು ತೀರಾ ಅಪರೂಪ. ಪಲ್ಗುಣಿ ನದಿ ತಟದಲ್ಲಿ ಸುಮಾರು 25ಕ್ಕಿಂತ ಅಧಿಕ ನೀರು ನಾಯಿಗಳು ಇರುವ ಶಂಕೆ ವ್ಯಕ್ತವಾಗಿದೆ.

ನೀರು ನಾಯಿ ಸಂತತಿ ಅಳಿವಿನಂಚಿನಲ್ಲಿದೆ. ಪಲ್ಗುಣಿ ನದಿ ಪ್ರದೇಶದ ಕುಬಳಬೆಟ್ಟು ಪರಿಸರದಲ್ಲಿ ಮಾತ್ರ ಹೆಚ್ಚಾಗಿ ಇವು ಕಂಡುಬರುತ್ತಿವೆ.

ಪಲ್ಗುಣಿ ನದಿ ಪ್ರದೇಶದ ಈ ಪರಿಸರದಲ್ಲಿ ಜನರು ಪ್ರಸ್ತುತ ನದಿಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆ ಇದ್ದು ನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಈ ಕಾರಣದಿಂದ ನೀರು ನಾಯಿಗಳು ಆಗಾಗ ಆಹಾರ ಅರಸಿಕೊಂಡು ಹಳ್ಳದತ್ತ ಬರುತ್ತಿವೆ.

Related posts

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಪರಿಹಾರ

Suddi Udaya

ಶಿಬಾಜೆ ಶತಚಂಡಿಕಾಯಾಗ : ಶಾಸಕ ಹರೀಶ್ ಪೂಂಜರಿಗೆ ಆಹ್ವಾನ

Suddi Udaya

ಬಿಕೆ ಹರಿಪ್ರಸಾದ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನಮಾನ ನೀಡುವಂತೆ ಬೆಳ್ತಂಗಡಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರು,ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ಒತ್ತಾಯ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ದಂಪತಿ ಭೇಟಿ

Suddi Udaya

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya
error: Content is protected !!