25.1 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಶಾಲಾ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಅರಿವು ತರಬೇತಿ ಕಾರ್ಯಕ್ರಮ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಅರಿವು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯಅತಿಥಿಗಳಾಗಿ ಶಾಂತಿಲಾಲ್ ಜಾತಿಯಾ, ಉಸ್ತುವಾರಿ ನಿರೀಕ್ಷಕರು, ವಿಪತ್ತು ನಿರ್ವಹಣೆ, ದಕ್ಷಿಣ ಕನ್ನಡ, ಸುಭಾಷ್ ಶಿಂಧೆ, ಸಬ್ ಇನ್ಸ್‌ಪೆಕ್ಟರ್, 10ನೇ ಬೆಟಾಲಿಯನ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಬೆಂಗಳೂರು, ಪಾಟೀಲ್ ನಿವೇಶ್ , ಬಾಲಕೃಷ್ಣ, ರಾಘೆ ರಾಮಕೃಷ್ಣ ರಕ್ಷಣಾ ಸಿಬ್ಬಂದಿಗಳು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (NDRF), 10ನೇ ಬೆಟಾಲಿಯನ್ ತಂಡ, ಬೆಂಗಳೂರು (ಕರ್ನಾಟಕ) ಇವರು ಆಗಮಿಸಿದ್ದರು.

ಸುಭಾಷ್ ಶಿಂಧೆ ಮಾತನಾಡಿ ವಿಪತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮುಖಾಂತರ ನೀಡಿದರು. ಬಳಿಕ ಮಾತನಾಡಿದ ಶಾಂತಿಲಾಲ್ ಜಾಟಿಯಾ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿಯನ್ನು ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಓದಿನ ಮಹತ್ವ ಹಾಗೂ ಸಾಧನೆಯ ಹಾದಿ ಅದಕ್ಕೆ ಪಡಬೇಕಾದ ಕಷ್ಟ ಇತ್ಯಾದಿಗಳನ್ನು ಬಹಳ ಮಾರ್ಮಿಕವಾಗಿ ವಿವರಿಸಿದರು. ಕೆಲ ವಿದ್ಯಾರ್ಥಿಗಳು ತಮಗೆ ಬಂದಂತ ಸಂದೇಹಗಳನ್ನು ಪ್ರಶ್ನಿಸುವ ಮುಖಾಂತರ ನಿವಾರಿಸಿಕೊಂಡರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಕಾವ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

Related posts

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಚದುರಂಗ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಪಜಿರಡ್ಕ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರ ನ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಕಾರ್ಯಕ್ರಮ ಹಾಗೂ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

Suddi Udaya
error: Content is protected !!