September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾಡಕಚೇರಿಗಳಲ್ಲಿ ಸರ್ವರ್ ಸಮಸ್ಯೆ-ಜನರು ಹೈರಾಣು

ಬೆಳ್ತಂಗಡಿ: ತಾಲೂಕಿನ ಪ್ರಸ್ತುತ ಬೆಳ್ತಂಗಡಿ, ಕೊಕ್ಕಡ, ವೇಣೂರು ನಾಡಕಚೇರಿಗಳಲ್ಲಿ ಸರ್ವರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಅಗತ್ಯ ಸೇವೆಗಳು ತಾತ್ಕಲಿಕವಾಗಿ ವಿಳಂಬಗೊಂಡಿದ್ದು ಸಾರ್ವಜನಿಕರು ಹೈರಾಣಾಗಿದ್ದಾರೆ.

ರಾಜ್ಯದ್ಯಾಂತ ನಾಡಕಚೇರಿಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಒಂದೇಡೆ ಜಡಿ ಮಳೆ ಸುರಿಯುತ್ತಿದ್ದು ಸೋಮವಾರ ಸಂತೆಯ ಭರಾಟೆಯೊಂದಡೆಯಾದರೆ ಸಾರ್ವಜನಿಕರು ತಾಲೂಕು ಕಚೇರಿಗೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಸಹಿತ ಇತರ ಸೇವೆಗಳಿಗೆ ಕಚೇರಿಗೆ ಆಗಮಿಸಿದ ಜನರು ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹೈರಣಾಗಿದ್ದಾರೆ.

ಕಳೆದ ಶನಿವಾರದಿಂದ ಈ ಸಮಸ್ಯೆ ಕಾಣಿಸಿಕೊಂಡಿದ್ದು ಜು.20ರಂದು ತೀವ್ರಗೊಂಡಿದೆ. ಇಂದು ಇದುವರೆಗೆ ಕೇವಲ 5/6 ಕಡತಗಳು ಮಾತ್ರ ಆನಲೈನ್‌ನಲ್ಲಿ ಸ್ವೀಕಾರಗೊಂಡಿದೆ. ಉಳಿದ ದಿನಗಳಲ್ಲಿ 60-65 ಕಡತಗಳು ಅಪ್ಲೋಡ್ ಆಗುತ್ತದೆ. ವಿದ್ಯಾರ್ಥಿಗಳು ಸಹಿತ ಇತರರ ಜಾತಿ ಆದಾಯ ಪ್ರಮಾಣ ಪತ್ರಕ್ಕೆ, ವಂಶವೃಕ್ಷ, ಪಿಂಚಣಿ ಸೇವೆಗಳಿಗೆ ಸರ್ವರ್ ಸಮಸ್ಯೆ ಭಾದಕವಾಗಿದ್ದು ಈ ಸಮಸ್ಯೆ ಎಂದು ಸರಿಯಾಗುತ್ತದೆ ಎಂಬುವುದು ಕಾದುನೋಡಬೇಕಿದೆ…

Related posts

ಮಚ್ಚಿನ: ಬಂಗೇರಕಟ್ಟೆಯಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ

Suddi Udaya

ಫೆ.9-10: ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ: ವಿವಿಧ ದೇಶ-ರಾಜ್ಯದಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಭಾಗಿ

Suddi Udaya

ಧರ್ಮಸ್ಥಳ; ಹದಗೆಟ್ಟ ‌ನೇರ್ತನೆ ರಸ್ತೆ; ಗ್ರಾಮಸ್ಥರಿಂದ ಶ್ರಮದಾನದ ಮೂಲಕ ದುರಸ್ತಿ

Suddi Udaya

ಬಿಷಪ್ ಲಾರೆನ್ಸ್ ಮುಕ್ಕುಯಿರವರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಗೌರವಾಭಿನಂದನೆ

Suddi Udaya

ಸುಲ್ಕೇರಿಮೊಗ್ರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಎಚ್.ಐ.ವಿ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!