24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಕೀರ್ತನಾ ಕಲಾ ತಂಡ ವತಿಯಿಂದ ಆಟಿಡೋಂಜಿ ಐತಾರೊ ಕಾರ್ಯಕ್ರಮ

ಮುಂಡಾಜೆ: ಕೀರ್ತನಾ ಕಲಾ ತಂಡ ಮುಂಡಾಜೆ ವತಿಯಿಂದ ಆಟಿಡೋಂಜಿ ಐತಾರೊ ಕಾರ್ಯಕ್ರಮವು ಮುಂಡಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ತಂಡದ ಸಂಚಾಲಕರಾದ ಮಧು ಶೆಟ್ಟಿ ಹುರ್ತಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯರಾದ ಬಾಬು ಪೂಜಾರಿ ಕೂಳೂರು ದ್ವೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡಿದರು. ಮುಖ್ಯ ಅತಿಥಿಗಳಾದ ತುಕಾರಾಮ್ ಸಾಲ್ಯಾನ್ ಆರ್ಲ ಆಟಿ ತಿಂಗಳ ಆಚಾರ- ವಿಚಾರದ ಬಗೆಗಿನ ಹಿತನುಡಿಗಳನ್ನು ನುಡಿದರು. ಅತಿಥಿಗಳಾಗಿ ಭಾಗವಹಿಸಿದ ನಾಮದೇವ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಸಂತ ನಾಯ್ಕ ಆಟಿ ಅಂದು-ಇಂದು ಇದರ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದಲ್ಲಿ ತಂಡದ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ, ರಾಮಣ್ಣ ಶೆಟ್ಟಿ ಅಗರಿ, ಪುಷ್ಪರಾಜ್ ಶೆಟ್ಟಿ ಭಾವಂತಬೆಟ್ಟು, ಕೇಶವ ಪೂಜಾರಿ ಶಾರದನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಂಡದ ಹಿರಿಯ ಸದಸ್ಯರುಗಳನ್ನು ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ತಂಡದ ಸದಸ್ಯರಿಂದ ಪುಣ್ಯಕೋಟಿ ಎಂಬ ಗೀತಾ ರೂಪಕವೂ ನಡೆಯಿತು. ನಂತರ ಆಟಿ ತಿಂಗಳ ತಿಂಡಿ ತಿನಿಸುಗಳ ಸವಿಯನ್ನು ಎಲ್ಲರಿಗೂ ಉಣಬಡಿಸಲಾಯಿತು. ಮಧ್ಯಾಹ್ನದ ನಂತರ ವಿವಿಧ ಆಟೋಟ ಸ್ವರ್ಧೆಗಳನ್ನು ಆಯೋಜಿಸಲ್ಪಟ್ಟಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ,ಪೋಷಕರು ಹಾಗೂ ಊರ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಪ್ರಾರ್ಥಿಸಿದರು. ತಂಡದ ಅಧ್ಯಕ್ಷ ಸದಾನಂದ ಬಿ ಮುಂಡಾಜೆ ಸ್ವಾಗತಿಸಿ, ಉಮೇಶ್ ಆಚಾರ್ಯ ಧನ್ಯವಾದ ನೀಡಿದರು. ಕಾರ್ಯಕ್ರಮನ್ನು ನಿಶ್ಮಿತಾ ಪೂಜಾರಿ ನಿರೂಪಿಸಿದರು.

Related posts

ಉಜಿರೆ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ; ಸರ್ವಧರ್ಮ ಸಮನ್ವಯ ಸಭೆ

Suddi Udaya

ಬೆಳಾಲು : ಅನೈತಿಕ ಸಂಬಂಧದಿಂದ ಪತ್ನಿಯನ್ನು ಬಾವಿಗೆ ತಳ್ಳಿದ ಪತಿ: ಧರ್ಮಸ್ಥಳ ಪೊಲೀಸರ ಲಾಠಿ ರುಚಿಗೆ ಸತ್ಯಾಂಶ ಬಯಲು

Suddi Udaya

ಶಬರಿಮಲೆ ಯಾತ್ರೆ ವೇಳೆ ರೈಲಿನಿಂದ ಬಿದ್ದು ವೃದ್ಧ ಸಾವು

Suddi Udaya

ಪುದುವೆಟ್ಟು: ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣ: ಜೆಸಿಬಿ ಮೂಲಕ ಪೊಲೀಸ್ ರಕ್ಷಣೆಯೊಂದಿಗೆ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya

ಕೊಯ್ಯೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ಮಾರ್ಟ್ ಟಿ. ವಿ. ಉದ್ಘಾಟನೆ ಮತ್ತು ಪೋಷಕರ ಮಹಾಸಭೆ

Suddi Udaya

ಸಿಡಿಲು ಮಳೆ: ಶಿಶಿಲ ರವಿ ರವರ ಮನೆಗೆ ಅಪಾರ ಹಾನಿ

Suddi Udaya
error: Content is protected !!