September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಶಾಲಾ ಎಲ್ ಕೆ ಜಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಬೆಳ್ತಂಗಡಿ: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಪುಟಾಣಿಗಳಿಗೆ ಉದ್ಯಮಿ ಆಶ್ರಪ್ ಬಳಂಜ ಸುಮಾರು 40 ಸಾವಿರ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸಮವಸ್ತ್ರವನ್ನು ಸರ್ವೋದಯ ಪ್ರೆಂಡ್ಸ್ ಕ್ಲಬ್ ನ ಮಾಜಿ ಅದ್ಯಕ್ಷ , ಖ್ಯಾತ ವಾಲಿಬಾಲ್ ಆಟಗಾರ ಸುರೇಶ್ ಹೇವ ಹಸ್ತಾಂತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ ಸರಕಾರಿ ಶಾಲೆ ಉಳಿಸಿ ಬೆಳೆಸಲು ಕಳೆದ ಎರಡು ವರ್ಷಗಳಿಂದ ಬಳಂಜ ಶಿಕ್ಷಣ ಟ್ರಸ್ಟ್ ಶ್ರಮಿಸುತ್ತಿದೆ. ಎರಡು ವರ್ಷಗಳಲ್ಲಿ ಅಥಿತಿ ಶಿಕ್ಷಕರ ನೇಮಕಾತಿ, ಕ್ರೀಡಾಂಗಣ ಅಗಲೀಕರಣ , ಕೊಠಡಿ ನವೀಕರಣ, ಚಿಣ್ಣರ ಅಂಗಣ ಸೇರಿದಂತೆ ಹಲವಾರು ಅಭಿವೃದ್ದಿ ಗೆ ದಾನಿಗಳ ಸಹಕಾರ ಪಡೆದು 70 ಲಕ್ಷಕ್ಕೂ ಅಧಿಕ ವೆಚ್ಚ ಮಾಡಲಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು ಮಂದಿನ ದಿನಗಳಲ್ಲಿ ನಾಲ್ಕನೇ ತರಗತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟ್ ಪ್ರವೀಣ್ ಹೆಚ್ ಎಸ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ ಅರ್, ಶಿಕ್ಷಕರುಗಳಾದ ಮಲ್ಲಿಕಾರ್ಜುನ, ಶಾರದಾ, ಸುಕನ್ಯಾ, ಶೈನಿ ರೀಮಾ ಕ್ರಾಸ್ತಾ, ವೀಣಾ, ಗಣೇಶ್, ಜಯಲಕ್ಮಿ, ಪ್ರತಿಕ್ಷಾ, ವೀಣಾ, ವಿಶಾಲ, ಕೀರ್ತನಾ, ನಿಶ್ಚಿತ, ಹೇಮಾ ಸುವರ್ಣ ಉದ್ಯಮಿಗಳಾದ ರಾಜೇಶ್ ನಾಲ್ಕೂರು, ಪ್ರಣಮ್ ಶೆಟ್ಡಿ ನಾಲ್ಕೂರು, ಲಾಯ್ ಬಳಂಜ, ಉಪಸ್ಥಿತರಿದ್ದರು.

Related posts

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya

ಕಾಶಿಪಟ್ಣ ಗ್ರಾ.ಪಂ. ಗೆ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ: ಸತೀಶ್. ಕೆ ಕಾಶಿಪಟ್ಣ ಮತ್ತು ಪಂ.ಅ.ಅ. ರಾಘವೇಂದ್ರ ಪಟೇಲ್ ರಿಂದ ಪ್ರಶಸ್ತಿ ಸ್ವೀಕಾರ

Suddi Udaya

ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ

Suddi Udaya

ಕೋಳಿ ಸಾಕಾಣಿಕೆ ರೈತ ಮುಖಂಡರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya

ಕುಕ್ಕಾಜೆ ದಿ. ಕುಶಾಲಪ್ಪ ನಾಯ್ಕರ ಮನೆಯವರಿಗೆ ಧನಸಹಾಯ ಹಸ್ತಾಂತರ

Suddi Udaya
error: Content is protected !!