September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಗುರುವಾಯನಕೆರೆಯಲ್ಲಿ ಹೊಂಡಗಳ ಹಾವಳಿ: ವಾಹನ ಸವಾರರ ಪರದಾಟ – ತಕ್ಷಣ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಬೆಳ್ತಂಗಡಿ: ಗುರುವಾಯನಕೆರೆ ಕೆರೆಯ ಸಮೀಪ ರಾಜ್ಯ ಹೆದ್ದಾರಿಯ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು,ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಉಂಟಾಗಿರುವ ದೊಡ್ಡ ದೊಡ್ಡ ಹೊಂಡಗಳಿಂದಾಗಿ ವಾಹನಗಳನ್ನು ಚಲಾಯಿಸುವುದು ಸವಾಲಾಗಿ ಪರಿಣಮಿಸಿದ್ದು, ಅಪಘಾತದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ಹರಸಾಹಸ ಪಡುತ್ತಿದ್ದು, ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡುವ ಸಂದರ್ಭಗಳಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರತಿನಿತ್ಯ ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆ ನೀರು ಹೊಂಡಗಳಲ್ಲಿ ನಿಂತಿರುವುದರಿಂದ ಅವುಗಳ ಆಳ ಅರಿಯಲು ಸಾಧ್ಯವಾಗದೆ ದ್ವಿಚಕ್ರ, ಕಾರುಗಳ ವಾಹನ ಸವಾರರು ಹೆಚ್ಚಾಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಈ ರಸ್ತೆ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಇದುವರೆಗೆ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ,ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಮೇ 10 : ಸ್ಪಂದನ ಬಂಟರ ಸೇವಾ ತಂಡದಿಂದ 50ನೇ ಸೇವಾ ಕಾರ್ಯಕ್ರಮ: ನೂತನ ಸ್ಪಂದನ ಮನೆ ಹಸ್ತಾಂತರ

Suddi Udaya

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ಜಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ

Suddi Udaya

ಶಿಬಾಜೆ: ಮನೆಗೆ ನುಗ್ಗಿ ಹಣ ತೆಗೆದು ಜೀವ ಬೆದರಿಕೆ – ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya

ವಾಣಿ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ

Suddi Udaya

ರಸ್ತೆಯಲ್ಲಿ ನಿಂತ ಮಳೆ ನೀರನ್ನು ಹಾರೆ ಹಿಡಿದು ಚರಂಡಿಗೆ ಬಿಡಿಸಿಕೊಟ್ಟತೆಕ್ಕಾರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್

Suddi Udaya

ರಾಜ್ಯಮಟ್ಟದ ಯುವಸಂಸತ್ತು ಸ್ಪರ್ಧೆ: ಎಸ್.ಡಿ.ಎಂ. ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!