September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎನ್.ಎಸ್.ಎಸ್ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಉಜಿರೆ : ತರಗತಿಗಳು ನಮಗೆ ಅಕ್ಷರ ಜ್ಞಾನವನ್ನು ಕಲಿಸಿಕೊಟ್ಟರೆ, ರಾಷ್ಟ್ರೀಯ ಸೇವಾ ಯೋಜನೆಯು ಶಿಸ್ತು, ಗೌರವ ಹಾಗೂ ಮೌಲ್ಯಯುತವಾಗಿ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ನಾಯಕತ್ವ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಲು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬಾಂಧವ್ಯವನ್ನು ಹಾಗೂ ಸಮಾಜದ ಮೇಲಿನ ಬದ್ದತೆಯನ್ನು ಹೆಚ್ಚಿಸುತ್ತದೆ. ಯೋಜನೆಯೂ ನಮ್ಮೊಳಗೆ ವಿನೂತನವಾದ ಬದಲಾವಣೆಗೆ ಸಾಕ್ಷಿಯಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಶೇಷಪ್ಪ ಕೆ ಅಭಿಪ್ರಾಯಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಹಿತ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಿದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೂರು ವರ್ಷಗಳ ಕಾಲ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಮಹೇಶ್ ಶೆಟ್ಟಿರವರನ್ನು ಕಾಲೇಜು ಹಾಗೂ ಸ್ವಯಂ ಸೇವಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ಕಾಲೇಜಿನ ಸಹಕಾರ ಹಾಗೂ ಸ್ವಯಂ ಸೇವಕರ ಸಕ್ರೀಯ ಬೆಂಬಲದಿಂದಾಗಿ ಕಳೆದ ಮೂರು ವರ್ಷಗಳಲ್ಲಿ 400 ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಹಲವು ರಾಷ್ಟ ಮಟ್ಟದ ಸೇವಾ ಕಾರ್ಯ ಹಾಗೂ ಸಾಧನೆಗಳು ನಮ್ಮ ಕಾಲೇಜಿಗೆ ಬಂದಿವೆ. ಸೇವಾ ಯೋಜನೆ ಎಂಬುವುದೇ ತೆರೆದ ವಿಶ್ವವಿದ್ಯಾಲಯ ಇದ್ದಂತೆ. ಇಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಲವು ಅವಕಾಶಗಳು ದೊರೆಯುವ ಜೊತೆಗೆ ಸಮಾಜ ಜೀವಿಯಾಗಿ ಬದುಕುವ ಕೌಶಲ್ಯವನ್ನು ಬೆಳೆಸುತ್ತದೆ. ಈ ಸಾಧನೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಎನ್.ಎಸ್.ಎಸ್. ಸಂಯೋಜನಧಿಕಾರಿಯಾಗಿ ನೂತನವಾಗಿ ಅಧಿಕಾರ ಸ್ವೀಕಾರಿಸಿದ ಉಪನ್ಯಾಸಕ ಡಾ. ಸುಧೀರ್ ಕೆ.ವಿ ಮಾತನಾಡಿ ಕಾಲೇಜು ಈ ಹಿಂದೆ ನೀಡಿದ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಈಗ ಯೋಜನೆಯ‌ ಜವಾಬ್ದಾರಿ ನನಗೆ ನೀಡಿರುವುದು ಅತ್ಯಂತ ಸಂತಸ ತಂದಿದೆ. ಸರ್ವರ ಸಹಕಾರ ಮತ್ತು ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾ, ನಾವೆಲ್ಲ ಸೇವಾ ಮನೋಭಾವದಿಂದ ತೊಡಗಿಕೊಳ್ಳೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಹಾಗು ಸಮಾಜಮುಖಿಯಾಗಿ ಬೆಳೆಯಲು ಹಲವು ಅವಕಾಶ ಮತ್ತು ವ್ಯವಸ್ಥೆಗಳನ್ನು ನಿರಂತರವಾಗಿ ಕಲ್ಪಿಸಿಕೊಡುತ್ತಾ ಬಂದಿದೆ. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಜೇನು ನೊಣದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು. ಒಳ್ಳೇಯ ಆಲೋಚನೆ ಮತ್ತು ಅವ್ಯಾಸಗಳು ನಮ್ಮನ್ನು ಸಾಧನಾ ಹಾದಿಯಲ್ಲಿ ಸಾಗಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಬಳಿಕ ನೂತನವಾಗಿ ಅಧಿಕಾರ ಸ್ವೀಕಾರಿಸಿದ ಸ್ವಯಂ ಸೇವಕರಿಗೆ ಮಂಗಳೂರು ವಿಶ್ವವಿದ್ಯಾಲಯ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಶೇಷಪ್ಪ ಕೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿ ರಚನೆಯ ಭಿತ್ತಿ ಪತ್ರಿಕೆ ಅನಾವರಣ ಗೊಳಿಸಿದರು. ವಿದ್ಯಾರ್ಥಿನಿ ಮಾನ್ಯ ಕಳೆದ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್ ಕಾರ್ಯ ಚಟುವಟಿಕೆ ಮತ್ತು ಸಾಧನೆಯ ವಾರ್ಷಿಕ ವರದಿಯನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಎನ್.ಎಸ್.ಎಸ್ ಯೋಜನಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಕೆ.ಎನ್ ಧನುಶ್ ಹಾಗು ಕುಮಾರಿ ಸಾಕ್ಷಿ ಎಮ್ ಎಸ್ ನಿರೂಪಿಸಿ, ಸ್ವಯಂ ಸೇವಕಿ ತೃಥಿ ವಂದಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ನಾಲ್ಕೂರು: ಬಿಜೆಪಿ ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಜೈಮಾತಾ ಕಾರ್ಯದರ್ಶಿಯಾಗಿ‌ ಸಂದೇಶ್ ಶೆಟ್ಟಿ ರಾಮನಗರ ಆಯ್ಕೆ

Suddi Udaya

ಬಳಂಜ ಅಮೃತ ಮಹೋತ್ಸವ ಸಮಿತಿಯಿಂದ ರಕ್ಷಿತ್ ಶಿವರಾಮ್ ರವರನ್ನು ಭೇಟಿ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು : ಹಂದೇವು ಮನೆಯ ಶ್ರೀಮತಿ ವೀರಮ್ಮ ದೇವಾಡಿಗ ನಿಧನ

Suddi Udaya

ಫ್ಯಾಬ್ರಿಕ್ ಪೈಂಟ್ ಡಿಸೈನ್ ಉಚಿತ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಅಶ್ವಮೇಧ ಕಾಮರ್ಸ್ ಫೆಸ್ಟ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!