25.8 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಖೋಟಾನೋಟು ಪತ್ತೆ ಪ್ರಕರಣ: ಗುರುವಾಯನಕೆರೆ ಅಪಾರ್ಟ್ಮೆಂಟ್ ಮೇಲೆ ಪೊಲೀಸ್ ದಾಳಿ

ಬೆಳ್ತಂಗಡಿ : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದ ಅಡೆಂಜ ನಿವಾಸಿ ಮಹಮ್ಮದ್ ಇದ್ರೀಸ್ ಎಂಬವರ ನೂತನ ಕಟ್ಟಡದ ಮೇಲೆ ಜು.15 ರಂದು ರಾತ್ರಿ ಖೋಟಾನೋಟು ತಯಾರಿಸುತ್ತಿದ್ದ ಕೇಂದ್ರಕ್ಕೆ ದಾಳಿ ಮಾಡಿ ಏಳು ಜನರನ್ನು ಬಂದಿಸಿದ್ದ ಪ್ರಕರಣ ಸಂಬಂಧ ಇಂದು ಓರ್ವ ಆರೋಪಿಯನ್ನು ಕರೆದುಕೊಂಡು ಬಂದು ಗುರುವಾಯನಕೆರೆ ಅಪಾರ್ಟ್ಮೆಂಟ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಉಪ್ಪಿನಂಗಡಿಯ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಈ ಮೊದಲು ಬೆಳ್ತಂಗಡಿಯ ಎರಡು ಬಾಡಿಗೆ ಮನೆಯಲ್ಲಿ ಖೋಟಾನೋಟು ಪ್ರಿಂಟ್ ಮಾಡಲು ತಯಾರಿ ನಡೆಸಿದ್ದರು. ಜಾಗ ಕಡೆಯಾಗಿದ್ದರಿಂದ ಉಪ್ಪಿನಂಗಡಿಗೆ ಸ್ಥಳಾಂತರ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಅದರಂತೆ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಪಾಡ್ಯಾರಮಜಲು ನಿವಾಸಿ ಅಬ್ದುಲ್ ಶಕಿಲ್ ಎಂಬವರಿಗೆ ಸೇರಿದ ಬಿ.ಎ.ಅಪಾರ್ಟ್ಮೆಂಟ್ ಹೆಸರಿನ 14 ಬಾಡಿಗೆ ಮನೆಗಳ ಪೈಕಿ 101 ಮತ್ತು 108 ಬಾಡಿಗೆ ಮನೆ ಮೇಲೆ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಜು.26 ರಂದು ಬೆಳಗ್ಗೆ 9 ಗಂಟೆಗೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು ಜೊತೆ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಸಂದೀಪ್ ಪುಂಡಲೀಕ ಶೋಳಂಬಿ(30) ನನ್ನು ಕರೆದುಕೊಂಡು ಬಂದು ದಾಳಿ ಮಾಡಿದ್ದಾರೆ.

ದಾಳಿ ವೇಳೆ 101 ಬಾಡಿಗೆ ಕೋಣೆಯಲ್ಲಿ ಎರಡು ಪ್ರಿಂಟರ್, ಪೈಂಟ್ ಡಬ್ಬ, ಪ್ರಿಂಟ್ ಮಾಡಲು ಉಪಯೋಗಿಸಿದ A4 ಶೀಟ್ ಪೇಪರ್ ಹಾಗೂ ಕೆಲ ವಸ್ತುಗಳನ್ನು ಮಧ್ಯಾಹ್ನ 1:03 ರವರೆಗೆ ಮಹಜರು ನಡೆಸಿ ವಶಪಡಿಸಿಕೊಂಡಿದ್ದಾರೆ.ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ನೇತೃತ್ವದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಕೌಶಿಕ್ , ಎಎಸ್ಐ ವೆಂಕಟೇಶ್ ನಾಯ್ಕ್, ಪಿಸಿ ನಾಗರಾಜ್ ಹಾಗೂ ಬೆಳ್ತಂಗಡಿ ಉಪವಿಭಾಗ ಕಚೇರಿಯ ಎಎಸ್ಐ ಲಾರೆನ್ಸ್, ಎಎಸ್ಐ ಶಿವರಾಂ, ಹೆಚ್.ಸಿ ಸವಿತಾ ಶೆಟ್ಟಿ, ಮನು ನಾಯ್ಕ್, ಯಕಂಮ್ಮ.ಬ.ಚೌದ್ರಿ, ಚಾಲಕ ಪ್ರವೀಣ್, ಸೋಕೋ ತಂಡದ ಅರ್ಪಿತಾ, ಕಾವ್ಯಶ್ರೀ, ಚಾಲಕ ಮುಸ್ತಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಜೆಡಿಎಸ್ ಪಕ್ಷದ ಪ್ರಭಾವಿ ನಾಯಕ ಹೆಚ್.ಡಿ ರೇವಣ್ಣ ಅಳದಂಗಡಿ ಸತ್ಯದೇವತಾ ಕ್ಷೇತ್ರಕ್ಕೆ ಭೇಟಿ

Suddi Udaya

ಬೆಳ್ತಂಗಡಿ: ದ್ವೇಷ ಭಾಷಣ ಆರೋಪ- ವಿ.ಹಿಂ.ಪ. ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಭವಿಷ್ಯದ ಶಿಕ್ಷಣದತ್ತ ಮತ್ತೊಂದು ದಿಟ್ಟ ಹೆಜ್ಜೆ – ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ AI & ರೋಬೋಟಿಕ್ಸ್ ತರಗತಿಗಳ ಆರಂಭ

Suddi Udaya

ಮುಂಡಾಜೆ: ಚಾಮುಂಡಿನಗರ ಸ.ಕಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Suddi Udaya

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

Suddi Udaya
error: Content is protected !!