26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ : ವಿ.ಹಿಂ.ಪ. ಬಜರಂಗದಳ ಕಲ್ಮಂಜ ಘಟಕದ ಸಮಿತಿ ಪುನರ್ ರಚನೆ

ಕಲ್ಮಂಜ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಲ್ಮಂಜ ಘಟಕ ಪುನರ್ ರಚನೆ ಜು.23 ರಂದು ವಿಶ್ವ ಹಿಂದೂ ಪರಿಷತ್ತಿನ ಹಿರಿಯರು ಮೋಹನ್ ರಾವ್ ಕಲ್ಮಂಜ ರವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪುತ್ತೂರು ಬಜರಂಗದಳ ಜಿಲ್ಲಾ ಸಹ ಸಯೋಜಕ ದಿನೇಶ್ ಚಾರ್ಮಾಡಿ ಮಾತನಾಡಿ ಸಂಘಟನೆಯ ಉದ್ದೇಶಗಳ ಬಗ್ಗೆ ತಿಳಿಸಿದರು. ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ವಿಷ್ಣು ಮಾರಾಠೆಯವರ ಸಮ್ಮುಖದಲ್ಲಿ ಕಲ್ಮಂಜ ಘಟಕದ ಜವಾಬ್ದಾರಿಯನ್ನು ಆಯ್ಕೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಕಲ್ಮಂಜ ಘಟಕದ ಅದ್ಯಕ್ಷರಾಗಿ ಸಾಂತಪ್ಪ ಮದಿಮಲ್ಕಟ್ಟೆ, ಉಪಾಧ್ಯಕ್ಷರಾಗಿ ದಿನೇಶ್ ಗೌಡ ಬನದಬೈಲು, ಕಾರ್ಯದರ್ಶಿ ಸಂದೀಪ್ ಪರಾರಿಮಜಲು, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಮುಂಚಾಣ, ಬಜರಂಗದಳ‌ ಸಂಚಾಲಕರಾಗಿ ಜಗದೀಶ್, ಸಹ ಸಂಯೋಜಕರಾಗಿ ಧನಂಜಯ ಮದ್ಮಲ್ಕಟ್ಟೆ, ವಿಶ್ವ ಹಿಂದೂ ಪರಿಷದ್ ಗೋರಕ್ಷಾ ಪ್ರಮುಖ್‌ ಜಯಾನಂದ ಕಲ್ಮಂಜ, ಬಜರಂಗದಳ‌ ಗೋರಕ್ಷಾ ಪ್ರಮುಖ್ ಮುರಳೀಧರ ಗೌಡ, ಸುರಕ್ಷಾ ಪ್ರಮುಖ್ ಪುರಕ್ಷಿತ್, ವಿದ್ಯಾರ್ಥಿ ಪ್ರಮುಖ್‌ ಭರತೇಶ್ ಮದ್ಮಲ್ಕಟ್ಟೆ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಹಿರಿಯರು ಮೋಹನ್ ರಾವ್ ಕಲ್ಮಂಜ, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ‌ ಅಧ್ಯಕ್ಷರು ವಿಷ್ಣು ಮರಾಠೆ, ಬಜರಂಗದಳ‌ ಪುತ್ತೂರು ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಬೆಳ್ತಂಗಡಿ ಪ್ರಖಂಡದ‌ ಪ್ರಚಾರ ಪ್ರಸಾರ ಪ್ರಮುಖ್‌ ನಾಗೇಶ್ ಕಲ್ಮಂಜ, ಬಜರಂಗದಳ‌ ಬೆಳ್ತಂಗಡಿ ಪ್ರಖಂಡ ಬಲೋಪಸನಾ ಪ್ರಮುಖ್ ಮುನೀಷ್ ಉಜಿರೆ, ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ, ಪ್ರವೀಣ್ ಕರಿಯನೆಲ, ಕೃಷ್ಣಮೂರ್ತಿ ಹೆಬ್ಬಾರ್,ಅನಿಲ್ ಮದ್ಮಲ್ಕಟ್ಟೆ, ಮೋಹನ್ ಕುಮಾರ್ ಹಾಗೂ ವಿ.ಹಿಂ.ಪ ಬಜರಂಗದಳ‌ ಕಲ್ಮಂಜ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಇಲ್ಲಿಯ ಜೋಡುಸ್ಥಾನದ ಬಳಿ ಗಾಳಿ ಮಳೆಗೆ ಬಿದ್ದ ಮರಗಳು ಗ್ರಾಮಸ್ಥರ ಸಹಕಾರದಿಂದ ತೆರವು ಕಾರ್ಯ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಸಾಫ್ಟ್‌ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟಿಒಟಿ ತರಬೇತಿ

Suddi Udaya

ಲಾಯಿಲ-ನಡ- ನಾವೂರು-ಇಂದಬೆಟ್ಟು ರಸ್ತೆ ಜಲಾವೃತ :ವಾಹನ ಸವಾರರ ಪರದಾಟ

Suddi Udaya

ಬೆಳ್ತಂಗಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ನಗರ ಪಂಚಾಯತ್ ಗೆ ಮನವಿ

Suddi Udaya

ಹೊಸಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಂದ ಉದ್ಘಾಟನೆ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

Suddi Udaya
error: Content is protected !!