26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ-ನಡ- ನಾವೂರು-ಇಂದಬೆಟ್ಟು ರಸ್ತೆ ಜಲಾವೃತ :ವಾಹನ ಸವಾರರ ಪರದಾಟ

ಬೆಳ್ತಂಗಡಿ: ಇಂದು ಸುರಿದ ಧಾರಾಕಾರ ಮಳೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲ, ನಡ, ನಾವೂರು, ಇಂದಬೆಟ್ಟು, ಕೊಲ್ಲಿ ಮಾರ್ಗದಲ್ಲಿ ರಸ್ತೆಯ ಮೇಲೆ ನೀರು ಹರಿದು ಜನಜೀವನ ಅಸ್ತವ್ಯಸ್ತವಾಗಿದೆ.

ಮೇಲಿಂದ ಹರಿದು ಬಂದ ಮಳೆ ನೀರು ರಸ್ತೆಯ ಮೇಲೆ ಕೆಸರು ಮಿಶ್ರಿತ ನೀರಾಗಿ ಹರಿಯುತ್ತಿದೆ. ಇದರಿಂದ ದ್ವಿಚಕ್ರ, ನಾಲ್ಕು ಚಕ್ರ ವಾಹನ ಸವಾರರು ಪರದಾಡುವಂತಾಯಿತು. ಬಸ್‌ಗಳು ಸಹ ನೀರಿನಲ್ಲಿ ನಿಧಾನವಾಗಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯಲ್ಲಿ ಹರಿದ ನೀರು ನೇರವಾಗಿ ಮನೆಗಳ ಅಂಗಳಕ್ಕೆ ನುಗ್ಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಭಯವೂ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Related posts

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ವೇಣೂರು ಸಹಕಾರಿ ಸಂಘಕ್ಕೆ ಪ್ರಶಸ್ತಿ

Suddi Udaya

ಮಾಜಿ ಶಾಸಕ ದಿ. ಕೆ. ವಸಂತ ಬಂಗೇರ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

Suddi Udaya

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಉಜಿರೆ–ಬೆಳಾಲು ಓಡಲ ರಸ್ತೆಯಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ದಿಣ್ಣೆ: ರಸ್ತೆ ದಿಣ್ಣೆಗೆ ಬಿಳಿ ಬಣ್ಣ ಬಳಿದು, ರಿಪ್ಲೆಕ್ಟರ್ ಅಳವಡಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್.

Suddi Udaya

ಧರ್ಮಸ್ಥಳದಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!