25.7 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಆಟಿಡೊಂಜಿ ಕೂಟ

ಮಡಂತ್ಯಾರು: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ ಪಾರೆಂಕಿ ಗ್ರಾಮ ಇದರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜು 26 ರoದು ಮಡಂತ್ಯಾರು ಎಸ್ ಡಿ ಎಸ್ ಮಿನಿ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿ.ಪ ಸದಸ್ಯೆ ತುಳಸಿ ಹಾರಬೆ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಯಂತಿ ಹಾರಬೆ, ಪ್ರಗತಿಪರ ಕೃಷಿಕರಾದ ಸಂಧ್ಯಾ ಯೋಗೀಶ್ ಕಡ್ತಿಲ ಇವರು ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಎಣ್ಮೂರು ಪಂಜ ಗರಡಿಯಲ್ಲಿರುವ ಅವಳಿ ವೀರರಾದ ಕೋಟಿ ಚೆನ್ನಯರ ಗಡಿಮಾಣಿಗಳಾದ ಅವಳಿ ಸೋದರರಾದ ರವೀಂದ್ರ ಮತ್ತು ರಾಜೇಂದ್ರರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಆಶಾ ಉಮೇಶ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಸoಘದ ಮಾರ್ಗದರ್ಶಕರಾದ ಪ್ರವೀಣ್ ಕುಮಾರ್ ದೋಟ ಕಾರ್ಯಕ್ರಮ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ.ಪ್ರಸಾದ್ ರವರು ಮಾತನಾಡಿ ಆಟಿ ತಿಂಗಳು ನಮ್ಮ ಪೂರ್ವಜರು ಪಾಲಿಸಿಕೊಂಡು ಬoದ ಸoಪ್ರದಾಯ ಸoಸ್ಕ್ರತಿ ಹಾಗೂ ಜೀವನ ಮೌಲ್ಯಗಳನ್ನು ಮುoದಿನ ಪೀಳಿಗೆಗೆ ಪರಿಚಯಿಸುವ ಮಹಾ ಕಾರ್ಯ ಪ್ರತಿ ಕುಟುಂಬದ ಜವಾಬ್ದಾರಿಯಾಗಿದೆ ಎಂದರು.


ವೇದಿಕೆಯಲ್ಲಿ ತಾಲೂಕು ಯುವವಾಹಿನಿ ವೇದಿಕೆಯ ಅಧ್ಯಕ್ಷೆ ಲೀಲಾವತಿ ವಸಂತ್, ಯುವವಾಹಿನಿಯ ನಿಕಟ ಪೂರ್ವ ಅಧ್ಯಕ್ಷರಾದ ಗುರುರಾಜ ಗುರಿಪಳ್ಳ, ಬೆಳ್ತಂಗಡಿ ತಾಲೂಕು ಸಮಿತಿ ನಿರ್ದೇಶಕರಾದ ಪ್ರಮೋದ್ ಕುಮಾರ್ ಬಳ್ಳಮಂಜ, ಗೌರವಾಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಮಾತೃ ಸಂಘದ ಅಧ್ಯಕ್ಷ ವೆಂಕಪ್ಪ ಪೂಜಾರಿ ಕೋಡ್ಲಕ್ಕೆ, ಕಾರ್ಯದರ್ಶಿ ಸುಭಾಸ್ ಪೂಜಾರಿ ಹಾರಾಬೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಚಿನ್ ಪೂಜಾರಿ ಅರುಂಬುಡ, ಕಾರ್ಯದರ್ಶಿ ಶರತ್ ಪೂಜಾರಿ ಹಾರಾಬೆ ಉಪಸ್ಥಿತರಿದ್ದರು. ಆಟಿ ತಿಂಗಳ ವಿಶೇಷತೆಗಳಲ್ಲಿ ಒಂದಾಗಿರುವ ಗ್ರಾಮಸ್ಥರ ರೋಗ ರುಜಿನಗಳನ್ನು ಕಳೆಯಲು ಆಟಿ ಕಳೆಂಜವನ್ನು ವೇದಿಕೆಯಲ್ಲಿ ಬರಮಾಡಿಕೊಳ್ಳಲಾಯಿತು. ಹಿoದಿನ ಕಾಲದ ಜಾನಪದ ಶೈಲಿಯ ಆಟಗಳನ್ನು ಆಯೋಜಿಸಲಾಗಿತ್ತು.

ದೈಹಿಕ ಶಿಕ್ಷಕ ಸುಭಾಸ್ ಪೂಜಾರಿ ಹಾರಾಬೆ ಹಾಗೂ ಕು. ಮೋಕ್ಷಾ ವಿ ಪೂಜಾರಿ ಇವರು ಸ್ಪರ್ಧಾ ಕಾರ್ಯಗಳನ್ನು ನಡೆಸಿಕೊಟ್ಟರು. ಸುಮಾರು 50 ರಿಂದ 100 ವರ್ಷಗಳಷ್ಟು ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಪರಿಕರಗಳನ್ನು ಪ್ರದರ್ಶನಕ್ಕಿಡಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಜಿ.ಪ ಸದಸ್ಯ ತುಂಗಪ್ಪ ಬಂಗೇರ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾ ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಸುವರ್ಣ, ಎಸ್ ಬಿ ಐ ಇನ್ಸೂರೆನ್ಸ್ ವಿಭಾಗೀಯ ವ್ಯವಸ್ಥಾಪಕರಾದ ಪದ್ಮನಾಭ ಸುವರ್ಣ, ಗೆಜ್ಜೆಗಿರಿ ಸಮಿತಿ ನಿರ್ದೇಶಕ ನಾರಾಯಣ ಪೂಜಾರಿ ಬಳ್ಳಮಂಜ, ಮಡಂತ್ಯಾರು ಗ್ರಾಮ ಪ್ರಶಾಂತ್ ಪ್ರತಿಮ ನಿಲಯ, ವಿಕೇಶ್ ಮಾನ್ಯ ಉದ್ಯಮಿ ಪ್ರಕಾಶ್ ಕಡ್ತಿಲ, ಮತ್ತು ವಿಶೇಷ ಆಹ್ವಾನಿತರಾಗಿ ಸ್ಥಳೀಯ ಪ್ರಮುಖರು ಆಗಮಿಸಿದ್ದರು. ಅನ್ವಿತಾ ನವಿನ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಅಶೋಕ್ ಮತ್ತು ಪ್ರಮೀಳಾ ಪ್ರಕಾಶ್ ಪ್ರಾರ್ಥನೆ ಗೈದರು. ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಆಶಾ ಉಮೇಶ್ ಕೋಟೆ ಸ್ವಾಗತಿಸಿದರು. ಮಲ್ಲಿಕಾ ಹರಿಶ್ಚಂದ್ರ ಧನ್ಯವಾದ ನೀಡಿದರು. ಯೋಗೇಶ್ ಪೂಜಾರಿ ಕಡ್ತಿಲ , ವಿಶ್ವನಾಥ ಪೂಜಾರಿ ಹಾರಬೆ ಮಾರ್ಗದರ್ಶನದಲ್ಲಿ ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದರು.


ಹಿಂದಿನ ದಿನಗಳಲ್ಲಿ ಆಟಿ ತಿಂಗಳಲ್ಲಿ ಬಳಸುತ್ತಿದ್ದ ಸುಮಾರು 39 ಬಗೆಯ ವೈವಿಧ್ಯಮಯ ಖಾದ್ಯಗಳನ್ನು ಗ್ರಾಮದ ಬಂಧುಗಳು ಸಿದ್ಧಗೊಳಿಸಿ ತಂದಿದ್ದು, ಸೇರಿದ ಸುಮಾರು 400 ರಷ್ಟು ಜನತೆ ಸವಿದು ಖುಷಿಪಟ್ಟರು.

Related posts

ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಓಣಂ ಸಂಭ್ರಮಾಚರಣೆ

Suddi Udaya

ಜು.13: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ

Suddi Udaya

ಮಹಾಶಿವರಾತ್ರಿಯ ಪ್ರಯಕ್ತ: ಫೆ.15,16 ರಂದು ಕೆ.ಎಸ್.ಆರ್ ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

Suddi Udaya

ರಾಷ್ಟ್ರಮಟ್ಟದ ಟೆಕ್ನೋ ಕಲ್ಚರ್ ಫೆಸ್ಟ್ ಇನ್ಸಿಗ್ನಿಯಾ: ಉಜಿರೆ ಎಸ್.ಡಿ.ಎಂ.ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ತೆಕ್ಕಾರುವಿನಲ್ಲಿ ಭಾರೀ ಗಾಳಿ ಮಳೆಗೆ ರಸ್ತೆಗೆ ಬಿದ್ದ ಮರ; ಸಂಚಾರಕ್ಕೆ ತೊಂದರೆ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ವಿಶೇಷ ಪೂಜೆ

Suddi Udaya
error: Content is protected !!