28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಡಂತ್ಯಾರು: ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಕರಾಟೆ ಸ್ಪರ್ಧೆಯು ಜು. 27 ರಂದು ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರಿನಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾದ ರಿಹಾ ಫಾತಿಮಾರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 9ನೇ ತರಗತಿಯ ಅಬ್ದುಲ್ ಬಹರಿ ರವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು, ಮತ್ತು 8ನೇ ತರಗತಿಯ ಮೊಹಮ್ಮದ್ ಶಿಝಾನ್, 10ನೇ ತರಗತಿಯ ಶೇಕ್ ಮಹಮ್ಮದ್ ಅಮನ್ , ಎರಿಕ್ ಜಾನ್ ಸಾಜಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕರಾಟೆ ತರಬೇತುದಾರರಾದ ಅಶೋಕ್ ಆಚಾರ್ಯ ರವರು ತರಬೇತಿಯನ್ನು ನೀಡಿರುತ್ತಾರೆ . ಶಾಲಾ ದೈಹಿಕ ಶಿಕ್ಷಕರಾದ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ಸಹಕಾರ ನೀಡಿರುತ್ತಾರೆ.

Related posts

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

Suddi Udaya

ಲಯನ್ಸ್ ಸಂಸ್ಥೆ ವತಿಯಿಂದ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನೂತನ ಸಮಿತಿ ಪದಗ್ರಹಣ

Suddi Udaya

ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜದ ನಂದಗೋಕುಲ ಗೋಶಾಲೆಯ ವತಿಯಿಂದ ಅಂಬೇಡ್ಕರ್ ಜಯಂತಿ ಮತ್ತು ವಿಶು ಹಬ್ಬ ಆಚರಣೆ

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗುರುವಂದನ ಮತ್ತು ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!