28.3 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಳಿಯ ಸಹಕಾರಿ ಸಂಘದಿಂದ ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಮಾಹಿತಿ

ಗೇರುಕಟ್ಟೆ: ಕಳಿಯ ಪ್ರಾ.ಕೃ.ಪ.ಸ. ಸಂಘದಿಂದ ಬೆಳೆ ವಿಮೆ, ಬೆಳೆ ಸಮೀಕ್ಷೆ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮ ಜು.28 ರಂದು ಸಂಘದ ಸಹಕಾರಿ ಸಭಾ-ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಳಿಯ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ವಸಂತ ಮಜಲು ವಹಿಸಿದರು.

ಸಂಘದ ಉಪಾಧ್ಯಕ್ಷ  ರಾಜ್ ಪ್ರಕಾಶ್ ಶೆಟ್ಟಿ ,  ಆಡಳಿತ ಮಂಡಳಿ ನಿರ್ದೇಶಕರಾದ ಯಂ ಹರಿದಾಸ ಪಡಂತ್ತಾಯ, ಬಾಲಕೃಷ್ಣ ಗೌಡ ಬಿರ್ಮೊಟ್ಟು,  ಚಂದ್ರವತಿ, ಮಮತಾ, ಗೋಪಾಲ ನಾಯ್ಕ್, ಕುಶಾಲಪ್ಪ ಗೌಡ, ಉದಿತ್ ಕುಮಾರ್, ಲೋಕೇಶ್ ಎನ್ ಹಾಗೂ ಕೇಶವ ಪೂಜಾರಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ವೇದಿಕೆಯಲ್ಲಿದ್ದರು.

ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯನಂದ ಕಲ್ಲಾಪು, ಸುಲ್ಕೇರಿಮೊಗ್ರು ಪ್ಯಾಕ್ಸ್ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಅಳದಂಗಡಿ ಪ್ಯಾಕ್ಸ್ ಅಧ್ಯಕ್ಷ ರಾಕೇಶ್ ಹೆಗ್ಡೆ, ತೆಕ್ಕಾರು ಪ್ಯಾಕ್ಸ್ ನಿರ್ದೇಶಕ ಇನಾಸ್ ರೊಡ್ರಿಗಸ್, ಸಂಘದ ಸದಸ್ಯರು, ರೈತಾಪಿ ವರ್ಗದವರು ಭಾಗವಹಿಸಿದ್ದರು.

ಬೆಸ್ಟ್ ಎಂಎಲ್ ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಕೃಷಿ ಅಧಿಕಾರಿ ಗಣೇಶ್ (ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ ಬಗ್ಗೆ), ಉಪ್ಪಿನಂಗಡಿ ಪ್ರಗತಿಪರ ಕೃಷಿಕ ಚಂದ್ರಶೇಖರ ತಾಳ್ತಾಜೆ (ಅಡಿಕೆ ಕೃಷಿ ಬಗ್ಗೆ),ಮೂಡುಬಿದ್ರೆ ಪ್ರಗತಿಪರ ಕೃಷಿಕ ಎಡ್ವಾರ್ಡ್ ರೆಬೆಲ್ಲೋ (ರಾಂಬೂಟನ್ ಮತ್ತು ಇತರೆ ಬೆಳೆಗಳ ಬಗ್ಗೆ) ಭಾಗವಹಿಸಿ ಮಾಹಿತಿಯನ್ನು ನೀಡಿದರು.

ನಿರ್ದೇಶಕ ಶೇಖರ್ ನಾಯ್ಕ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕವಿತಾ ಶೆಟ್ಟಿ ವಂದಿಸಿ,
ಉಮೇಶ್ ಕೇಲ್ತಾಜೆ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Related posts

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಆರಂಭ

Suddi Udaya

ಕುತೂಹಲ ಕೆರಳಿಸಿದ ಮಾಲಾಡಿ ಗ್ರಾ. ಪಂ. ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿನ ಪೈಪೋಟಿ,: ಅಧ್ಯಕ್ಷರಾಗಿ ಪುನೀತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ‍ಸೆಲೆಸ್ಟಿನ್ ಡಿಸೋಜ ಆಯ್ಕೆ

Suddi Udaya

ಉಜಿರೆ ಎಸ್. ಡಿ.ಎಂ ಕಾಲೇಜು : ಎನ್ ಎಸ್ ಎಸ್ ಘಟಕಕ್ಕೆ ಸುವರ್ಣ ಸಂಭ್ರಮ: ಅ.5:ಹಿರಿಯ ಸ್ವಯಂಸೇವಕರ ಒಗ್ಗೂಡುವಿಕೆಯಲ್ಲಿ ‘ ಸುವರ್ಣ ಸಮ್ಮಿಲನ ‘ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಮಾನ್ವಿ ಲೈಟ್ ಹೌಸ್ ಶುಭಾರಂಭ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya
error: Content is protected !!