25.6 C
ಪುತ್ತೂರು, ಬೆಳ್ತಂಗಡಿ
September 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಡಾ.ಎಸ್.ಡಿ ಶೆಟ್ಟಿ ನಿಧನಕ್ಕೆ ದ. ಕ.ಜಿಲ್ಲಾ ಕ.ಸಾ.ಪ ಸಂತಾಪ

ಬೆಳ್ತಂಗಡಿ: ಡಾ ಎಸ್.ಡಿ. ಶೆಟ್ಟಿ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ,ವಿಭಾಗ ಮುಖ್ಯಸ್ಥರಾಗಿ ಮತ್ತು ಡಾ. ಹಾ.ಮಾ.ನಾ ಸಂಶೋಧನಾ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಸುಮಾರು 51 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು . ಅಲ್ಲದೆ, ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಕಟ್ಟುವಲ್ಲಿ ವಿಶೇಷವಾದಂತಹ ಶ್ರಮವನ್ನು ವಹಿಸಿದವರು. ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಯೂ ಕೂಡ ಇವರು ಅನನ್ಯ ಸೇವೆಯನ್ನು ಸಲ್ಲಿಸಿದರು.

ಹಸ್ತಪ್ರತಿಯ ಅಧ್ಯಯನ ಶಾಸನಗಳ ಅಧ್ಯಯನ, ಇತಿಹಾಸದ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರಗಳು ಕೂಡ ಆಗಿದ್ದವು. ಇವರು ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ ಇಳಂತಿಲ ದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ.

ಸಂಶೋಧನೆಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಇವರು ಈ ದಿನ ನಮ್ಮನ್ನು ಅಗಲಿದ್ದಾರೆ ಎಂಬುದನ್ನು ತಿಳಿಸಲು ಅತ್ಯಂತ ದುಃಖವಾಗುತ್ತಿದೆ .ಇವರ ನಿಧನದಿಂದ ಹಿರಿಯ ತಲೆಮಾರಿನ ಸಾಹಿತ್ಯ ಸಂಶೋಧಕರು ಒಬ್ಬರನ್ನು ಕಳೆದುಕೊಂಡಂತಾಗಿದೆ .
ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು,ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು
ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪ್ರಮೋದ್ ಕುಮಾರ್

Suddi Udaya

ಮಾಲಾಡಿ: ರೋನಾಲ್ಡ್ ಫೆರ್ನಾಂಡಿಸ್ ನಿಧನ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ : ಹೊರ ಕಾಣಿಕೆಯ ಆಕಷ೯ಕ ಹಾಗೂ ಭವ್ಯ ವಾದ ಶೋಭಾಯಾತ್ರೆ – ಯಕ್ಷಗಾನ ವೇಷ, ಹತ್ತು ಭಜನಾ ತಂಡಗಳಿಂದ ಕುಣಿತ ಭಜನೆ, ಕೊಂಬು,ಚೆಂಡೆ, ವಾದ್ಯ ವಿಶೇಷ ಆಕಷ೯ಣೆ

Suddi Udaya

ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ಒಂದು ದಿನದ ಪುನರ್ಮನನ ಶಿಬಿರ

Suddi Udaya

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಉಜಿರೆಯ ಅಕ್ಕ ಕೆಫೆಗೆ ಭೇಟಿ

Suddi Udaya
error: Content is protected !!