25.6 C
ಪುತ್ತೂರು, ಬೆಳ್ತಂಗಡಿ
September 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

“ಕಾಶಿ ಸದನ’ ವಸತಿ ಯೋಜನೆಯ ಫಲಾನುಭವಿಗಳಿಗೆ ಧನಸಹಾಯದ ಚೆಕ್ ಹಸ್ತಾಂತರ

ಬೆಳ್ತಂಗಡಿ: ತಾಲೂಕು ಬಂಟರ ಸಂಘದ ಗೌರವ ಮಾರ್ಗದರ್ಶಕರು ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ತಮ್ಮ ತಾಯಿ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಕಾಶಿ ಸದನ’ವಸತಿ ಯೋಜನೆಯ ಫಲಾನುಭವಿಗಳಿಗೆ ಧನಸಹಾಯದ ಚೆಕ್ ವಿತರಿಸಲಾಯಿತು.

ಏಪ್ರಿಲ್ 28 ರಂದು ನಡೆದ ಸರಳ ಸಮಾರಂಭದಲ್ಲಿ, ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಅವರು ವಿವಿಧ ವಲಯಗಳ ಫಲಾನುಭವಿಗಳಿಗೆ ಸಹಾಯಧನ ಹಸ್ತಾಂತರಿಸಿದರು.

ವೇಣೂರು ವಲಯದ ಆರಂಬೋಡಿ, ಉಜಿರೆ ವಲಯದ ಮುಂಡಾಜೆ ಹಾಗೂ ಮಡಂತ್ಯಾರು ವಲಯದ ಮಚ್ಚಿನ ಗ್ರಾಮದ ಫಲಾನುಭವಿಗಳಿಗೆ ವಸತಿ ಯೋಜನೆಯ ಮೊದಲ ಹಂತದ ತಲಾ 1 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಾರಾವಿ ವಲಯದ ಕೊಕ್ರಾಡಿ ಗ್ರಾಮದ ಫಲಾನುಭವಿಯೊಬ್ಬರಿಗೆ ಯೋಜನೆಯ ಎರಡನೇ ಹಂತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ಹಾಗೂ ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ ಉಪಸ್ಥಿತರಿದ್ದು, ಯೋಜನೆಯ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Related posts

ನಿಡ್ಲೆ :ಅಸ್ತಿ ಮಜ್ಜೆ ಶಸ್ತ್ರಚಿಕಿತ್ಸೆ ನೆರವು

Suddi Udaya

ಉಜಿರೆ: ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಬೆಳ್ತಂಗಡಿ ಸ್ಟೇಟ್‌ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಸಂತ ಅಂತೋಣಿ ಚರ್ಚ್ ಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರರವರಿಂದ ಮತದಾನ

Suddi Udaya

ಶಾಸಕ ಹರೀಶ್ ಪೂಂಜರಿಗೆ ಕರ್ನಾಟಕ ಟಿವಿ “ಲೀಡರ್ ಅವಾರ್ಡ್ಸ್”

Suddi Udaya
error: Content is protected !!