September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು: ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ

ಬೆಳ್ತಂಗಡಿ: ನಮ್ಮೊಳಗಿನ ಅದ್ಭುತ ಶಕ್ತಿಗಳನ್ನು ಗುರುತಿಸಿ ಪ್ರಕಟಿಕರಿಸುವುದೇ ವಿದ್ಯಾಭ್ಯಾಸದ ಮೂಲ ಉದ್ದೇಶ. ಪಿಯು ಶಿಕ್ಷಣ ಬದುಕಿನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಮೂಲ್ಯ ಸಮಯ. ಮನಸ್ಸುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ, ಭಾವನೆಗಿಂತ ಶಿಸ್ತಿಗೆ ಪ್ರಾಮುಖ್ಯತೆಯನ್ನು ನೀಡಿ ಎಂದು ಹಿರಿಯ ವಕೀಲರು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಅವರು ಆ.1ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ವಿದ್ವತ್ ಪಿಯು ಕಾಲೇಜು ವತಿಯಿಂದ ನಡೆದ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಗಳು ವ್ಯವಹಾರ ಕ್ಷೇತ್ರವಾಗದೆ ಉತ್ತಮ ಶಿಕ್ಷಣವನ್ನು ನೀಡಬೇಕು. ಬದುಕಿನ ಅಮೂಲ್ಯ ಎರಡು ವರ್ಷಗಳನ್ನು ಹಾಳು ಮಾಡದೆ ಕೌನ್ಸಿಲರ್ ಗಳು ನೀಡುವ ಮಾರ್ಗದರ್ಶನವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದರು.

ವೇದಿಕೆಯಲ್ಲಿ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಇ ಮಂಡಗಳಲೆ, ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಕಾಶಿನಾಥ ಎಂ.ಕೆ., ಪ್ರಾಂಶುಪಾಲರಾದ ಬಾಲಕೃಷ್ಣ ನಾಯಕ್, ಆಡಳಿತಾಧಿಕಾರಿ, ಅಶೋಕ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. *ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:* ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಚಿನ್ಮಯ್ ಜಿಕೆ, ಸಂಪತ್ ಕುಮಾರ್, ತನುಶ್ರೀ, ಪ್ರತೀಕ್ ವಿಎಸ್, ಅಜಿತ್ ಎಚ್.ಸಿ, ಮನೀಶ್ ಡಿ, ರಾಹುಲ್ ಸ್ವಾಮಿ, ರಿತೇಶ್, ಪ್ರಥಮ್ ಆರ್., ರಾಹುಲ್ ಜಿಎಸ್, ರಿಶಾಂತ್ ವೈಪಿ, ಸೃಷ್ಟಿ ಎಸ್, ನೇಹಾ ಭಟ್, ಧ್ಯಾನ್ ಎಸ್. ಹಾಗೂ ಅವರ ಪೋಷಕರುರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಾದ ಸನ್ನಿಧಿ ಎ.ಎಚ್. ಸ್ವಾಗತಿಸಿದರು. ಕಾಶ್ವಿ ದಿನೇಶ್ ವಂದಿಸಿದರು.

Related posts

ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ತಣ್ಣೀರುಪoತ ವಲಯ ಸದಸ್ಯರಿಂದ ವಿವಿಧ ಜಾತಿಯ ಹಣ್ಣು ಹಂಪಲು ಗಿಡ ನಾಟಿ

Suddi Udaya

ಬಂಡಾಜೆ ಕಾಡಿನಲ್ಲಿ ಗುಡ್ಡಜರಿತ

Suddi Udaya

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನುಜ್ಞಾ ಕಲಶ ಹಾಗೂ ಜೀರ್ಣೋದ್ಧಾರ ಕಾರ್ಯಾರಂಭ

Suddi Udaya

ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ: ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ

Suddi Udaya

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಅಂಗದಾನ ಜಾಗೃತಿ ಕಾರ್ಯಕ್ರಮ ‘ಧಾತ್ರು’ ಆಯೋಜನೆ

Suddi Udaya

ರಕ್ಷಿತ್ ಶಿವರಾಂ ಬೆಂಗಳೂರಿನಿಂದ ಬೆಳ್ತಂಗಡಿಗೆ ಆಮದು ಆದ ನಾಯಕನಾದರೆ, ಬೆಂಗಳೂರಿನಲ್ಲಿದ್ದ ಹರೀಶ್ ಪೂಂಜ ಬೆಳ್ತಂಗಡಿಗೆ ಆಮದು ಆಗಿ ಚುನಾವಣೆಗೆ ನಿಲ್ಲಲಿಲ್ಲವೇ: ಧರಣೇಂದ್ರ ಕುಮಾರ್

Suddi Udaya
error: Content is protected !!