September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ ಹಾಗೂ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿ

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲಾ ಘಟಕದ ಜುಲೈ ತಿಂಗಳ ಸಾಮಾನ್ಯ ಸಭೆ ಹಾಗೂ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿಯು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ವಹಿಸಿದರು. ಘಟಕದ ಕಾರ್ಯ ವೈಖರಿಯನ್ನು ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರು ಶ್ಲಾಘಿಸುತ್ತಾ ಮುಂದಿನ ವಲಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಘಟಕದ ವತಿಯಿಂದ ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಆಯುಷ್ ಜೈನ್ ಅವರು ಅತಿಥಿಗಳನ್ನು ಆಹ್ವಾನಿಸಿ ಸಭೆಗೆ ವಲಯ ಉಪಾಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದಕ್ಷ ಜೈನ್ ವಾಚಿಸಿದರು.

ಈ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಯೋಗೀಶ್ ಎಸ್., ರೇಷ್ಮಾ ಡಿ ಅಲ್ಮೇಡಾ ಮತ್ತು ಅಕ್ಷತ್ ರೈ ಅವರಿಗೆ ಶುಭಾಶಯವನ್ನು ಸಲ್ಲಿಸಲಾಯಿತು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಶೋಭಾ ಪಿ‌., ಕೆ. ಶ್ರೀಧರ ರಾವ್, ಸಂತೋಷ್ ಜೈನ್, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ನಿತ್ಯಾನಂದ ರೈ ಹಾಗೂ ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ವಂದಿಸಿದರು.

Related posts

ಕಾಜೂರು ಉರೂಸ್‌ ಸಮಾಪ್ತಿ : ಸಾವಿರಾರು ಮಂದಿಗೆ ಅನ್ನದಾನ

Suddi Udaya

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

Suddi Udaya

ಬದನಾಜೆ ಸ. ಉ. ಪ್ರಾ. ಶಾಲಾ ನವೀಕರಣ ಉತ್ಸವ

Suddi Udaya

ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಶ್ರೀ ಗುರುದೇವ ಪ್ರ.ದ. ಕಾಲೇಜಿನ ವಿದ್ಯಾರ್ಥಿನಿ ಹಸ್ತವಿ ಪ್ರಥಮ ಸ್ಥಾನ

Suddi Udaya

ಕುತ್ಲೂರು: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಧರ್ಮಸ್ಥದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹ75 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

Suddi Udaya
error: Content is protected !!