26.1 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸಾಧನೆ

ಬೆಳ್ತಂಗಡಿ: 2025–26ನೇ ಸಾಲಿನ ರಾಷ್ಟ್ರಮಟ್ಟದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 6ನೇ ತರಗತಿಯ ಭಾನ್ವಿ ಹಾಗೂ ಆದ್ಯ ಆರ್., 7ನೇ ತರಗತಿಯ ಅಭಿಜ್ಞಾ ಮತ್ತು ಪರಿಣಿತ, 8ನೇ ತರಗತಿಯ ಸಾನ್ವಿ ಜೆ. ಶೆಟ್ಟಿ ಹಾಗೂ ದಿಶಾ ಹೆಗ್ಡೆ, 9ನೇ ತರಗತಿಯ ಹಿತಾ ಜೆ. ಸೇರಿದಂತೆ ಒಟ್ಟು ಏಳು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಆ01 ರಂದು ಬೆಂಗಳೂರಿನ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ನಡೆದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಘಟಿಕೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ. ಎಸ್. ಜಿ. ಸುಶೀಲಮ್ಮ ಅವರ ಸಮ್ಮುಖದಲ್ಲಿ ಪದಕ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪತ್ರ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ. ಆರ್. ಅವರ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಪರೀಕ್ಷಾ ಸಂಯೋಜಕಿಯಾಗಿರುವ ಶಿಕ್ಷಕಿ ಶ್ರೀಮತಿ ಪ್ರವೀಣಾ ಕಾಮತ್ ಅವರ ಸಮರ್ಪಕ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ.

ವಿದ್ಯಾರ್ಥಿಗಳ ಈ ರಾಷ್ಟ್ರಮಟ್ಟದ ಸಾಧನೆಯು ಶಾಲೆಗೆ ಕೀರ್ತಿ ತಂದಿದ್ದು, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

ವೇಣೂರು: ಹಂದೇವು ನಿವಾಸಿ ಕಲ್ಯಾಣಿ ದೇವಾಡಿಗ ನಿಧನ

Suddi Udaya

ಉಜಿರೆ  : ಎಸ್.ಡಿ.ಎಂ ಪ.ಪೂ. ವಸತಿ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿವಸ ಆಚರಣೆ’

Suddi Udaya

ಕೇರಳ ಹೊಟೇಲ್ ಮಾಲಕನ ಹತ್ಯೆ ಪ್ರಕರಣ: ಹೊಟೇಲ್ ಕೆಲಸಗಾರ ಬೆಳ್ತಂಗಡಿಯ ಯುವಕ ಬಂಧನ

Suddi Udaya

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಮೇಲಂತಬೆಟ್ಟು ಮೂಡಲ ಹಾಗೂ ಕೋಟಿ ಕಟ್ಟೆ ಕೊಡಿಯೇಲ್ ರಸ್ತೆಯ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ ಪೂರ್ಣ

Suddi Udaya

ಗುರುವಾಯನಕೆರೆಯಲ್ಲಿ ವಾಹನದ ಟಯರೊಂದು ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆ: ಜನರಲ್ಲಿ ಆತಂಕ ಸೃಷ್ಟಿ

Suddi Udaya

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!