32.3 C
ಪುತ್ತೂರು, ಬೆಳ್ತಂಗಡಿ
September 19, 2026
ಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು: ವಾರೀಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ ಮನವಿ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಮಂಜುನಾಥ ಹೋಟೆಲ್ ಬಳಿ ಈ ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಯು ಆ.2 ರಂದು ರಾತ್ರಿ ವೇಳೆ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದನ್ನು ಸಾರ್ವಜನಿಕರು ಗಮನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲು ಆ.3 ರಂದು ಬೆಳಿಗ್ಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯ ವಯಸ್ಸು ಸುಮಾರು 60–65 ವರ್ಷ, ಎತ್ತರ 5.5 ಅಡಿ, ಸಪೂರ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಮುಖದಲ್ಲಿ ಕಪ್ಪು-ಬಿಳಿ ಮಿಶ್ರಿತ ಮೀಸೆ ಇದೆ. ತಲೆಯಲ್ಲಿ ಸುಮಾರು 3.5 ಇಂಚು ಉದ್ದದ ಕಪ್ಪು-ಬಿಳಿ ನೆರೆತ ಕೂದಲು ಇದ್ದು, ಎಡ ಕಣ್ಣಿನ ಕೆಳಭಾಗದಲ್ಲಿ ಹಾಗೂ ಎಡ ತೋಳಿನ ಮೇಲೆ ಕಪ್ಪು ಎಳ್ಳು ಮಚ್ಚೆಗಳಿವೆ. ಮೃತರು ಕೆಂಪು ಬಣ್ಣದ ಜರ್ಕಿನ್, ನೀಲಿ ಚೌಕಳಿ ಲುಂಗಿ ಹಾಗೂ “RUPA Jon” ಎಂದು ಬರೆದಿರುವ ನೀಲಿ ಬಣ್ಣದ ಒಳಚಡ್ಡಿ ಧರಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಗುರುತು ಅಥವಾ ವಾರೀಸುದಾರರ ಬಗ್ಗೆ ಮಾಹಿತಿ ಇರುವವರು ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಧರ್ಮಸ್ಥಳ ಪೊಲೀಸರು ಮನವಿ ಮಾಡಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣೆ 08256-277253, PSI ಧರ್ಮಸ್ಥಳ 7795424204 / 8277986449, CPI ಬೆಳ್ತಂಗಡಿ 9480805336, ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ 0824-2220500, ಇ-ಮೇಲ್ [email protected] ಸಂಪರ್ಕಿಸಲು ಕೊರಲಾಗಿದೆ.

Related posts

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ

Suddi Udaya

ಉಜಿರೆಯಲ್ಲಿ ನ್ಯೂ ತ್ರಿಲೋಕ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ & ಕಾಸ್ಯೂಮ್ ಸೆಂಟರ್ ಪ್ರಾರಂಭೋತ್ಸವ ಡ್ಯಾನ್ಸ್ ತರಭೇತಿ ಪಡೆಯುವವರಿಗೆ ತ್ರಿಲೋಕ್ ಉತ್ತಮ ವೇದಿಕೆ- ಸುಧೀರ್ ಜೈನ್

Suddi Udaya

ಕಡಿರುದ್ಯಾವರ :ಡೆಂಗ್ಯೂ ಜ್ವರದ ಬಗ್ಗೆ ಜನ ಜಾಗೃತಿ ಅಭಿಯಾನ

Suddi Udaya

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ

Suddi Udaya

ಸೋಮಂತಡ್ಕ ಟಿಪ್ಪರ್ ಪಲ್ಟಿ

Suddi Udaya

ಕುವೆಟ್ಟು ವರಕಬೆ ಸಮೀಪ ರಸ್ತೆಗೆ ತುಂಡಾಗಿ ಬಿದ್ದ ಎಚ್ ಟಿ‌ ಲೈನ್ ವಿದ್ಯುತ್ ವಯರ್: ವಾಹನ ಸಂಚಾರ ಅಸ್ತವ್ಯಸ್ತ

Suddi Udaya
error: Content is protected !!