27.4 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ

ಉಜಿರೆ; 2025-26 ನೇ ಸಾಲಿನ ರಾಷ್ಟ್ರ ಮಟ್ಟದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಆರನೇ ತರಗತಿಯ ಶಶಿಧರ್ ಹಾಗೂ ಸನ್ನಿಧಿ ಜಿ ಕುಲಾಲ್ ಏಳನೇ ತರಗತಿಯ ಕೃಷ್ಣತೇಜ ಮತ್ತು ಉತ್ತಮ್ ಎಂ ಕೆ., 9ನೇ ತರಗತಿಯ ಅನುಶ್ರೀ ಹೊಳ್ಳ 10ನೇ ತರಗತಿಯ ಸ್ಪೂರ್ತಿ ಎಸ್. ಸೇರಿದಂತೆ ಒಟ್ಟು ಆರು ವಿದ್ಯಾರ್ಥಿಗಳು ಬೆಂಗಳೂರಿನ ಮಹದೇವ ದೇಸಾಯಿ ಸಭಾಂಗಣ ಗಾಂಧಿ ಭವನದಲ್ಲಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ. ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಸಂಯೋಜಕರಾದ ಶಿಕ್ಷಕಿ ರೇಷ್ಮಾ ಇವರನ್ನು ಸನ್ಮಾನಿಸಲಾಯಿತು. ಈ 10ನೇ ವರ್ಷದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಘಟಿಕೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಡಾಕ್ಟರ್ ಎಸ್ ಜೆ ಸುಶೀಲಮ್ಮ ಹಾಗೂ ಪ್ರೊ. ಶೋಭಾ ಜಿ ನಿರ್ದೇಶಕರು ಕಾಲೇಜ್ ಶಿಕ್ಷಣ ಇಲಾಖೆ ಬೆಂಗಳೂರು. ನಾಡೋಜ ಡಾ. ವೂಡೇ ಪಿ .ಕೃಷ್ಣ ಅಧ್ಯಕ್ಷರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ಗಿರೀಶ್ ಕುಲಕರ್ಣಿ ಪರೀಕ್ಷಾ ನಿಯಂತ್ರಣ ಅಧಿಕಾರಿ ಜಲಗಾಂ ಮಹಾರಾಷ್ಟ್ ಮತ್ತು ಡಾ. ಅಭಿದ ಬೇಗಂ ರಾಜ್ಯ ಸಂಯೋಜಕರು ಗಾಂಧೀ ವಿಚಾರ ಸಂಸ್ಕರಣ ಪರೀಕ್ಷೆ ಬೆಂಗಳೂರು ಇವರು ಭಾಗಿಗಳಾಗಿದ್ದರು.

ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಶಿಕ್ಷಕಿಯನ್ನು ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವಿದ್ಯಾ ಲಕ್ಷ್ಮಿ ಯವರು ಅಭಿನಂದಿಸಿದರು.

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿಗಳು ಕವಾಲಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲು: ತನಿಖೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ ಧರ್ಮಸ್ಥಳ ಪೊಲೀಸರು

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30 ಕ್ಕೆ ಮುಂದೂಡಿಕೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಂಭ್ರಮದ ಪ್ರತಿಭಾ ದಿನಾಚರಣೆ

Suddi Udaya

ಬಜೆಟ್ ನಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಕ್ಕೆ 200 ಕೋಟಿ ಅನುದಾನ ಅಭಿನಂದನೀಯ : ಜಿಲ್ಲಾ ಮಲೆಕುಡಿಯ ಸಂಘ ದಕ್ಷಿಣ ಕನ್ನಡ

Suddi Udaya

ಕಳೆಂಜ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಪೋಕ್ಸೋ ಪ್ರಕರಣ: ಸರಿಯಾದ ತನಿಖೆಯನ್ನು ಮಾಡಿ ಸತ್ಯಾಂಶವನ್ನು ಹೊರ ತರುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು: ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ

Suddi Udaya
error: Content is protected !!