28.3 C
ಪುತ್ತೂರು, ಬೆಳ್ತಂಗಡಿ
September 21, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ರಾಜೇಶ್ ಪುದುಶೇರಿ ನೇತೃತ್ವದ ಸಹನಾಶ್ರೀ ಫೌಂಡೇಶನ್‌ ಬೆಂಬಲ-ಬೆಂಗಳೂರಿನಲ್ಲಿ ನಡೆಯಲಿರುವ ಕಬಡ್ಡಿ ಲೀಗ್‌ಗೆ ರೂ 1 ಲಕ್ಷ ದೇಣಿಗೆ

ಬೆಳ್ತಂಗಡಿ: ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಸಂಕಲ್ಪದೊಂದಿಗೆ ಸಹನಾಶ್ರೀ ಫೌಂಡೇಶನ್‌ ವತಿಯಿಂದ ಬೆಂಗಳೂರಿನಲ್ಲಿ ಅ.1ರಿಂದ 8ರವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಬೆಂಬಲ ನೀಡಲಾಗಿದೆ.

ಕರ್ನಾಟಕ ರಾಜ್ಯ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಉದ್ದೇಶದಿಂದ ಸಹನಾಶ್ರೀ ಫೌಂಡೇಶನ್‌ ಅಧ್ಯಕ್ಷ ರಾಜೇಶ್ ಪುದುಶೇರಿ ಅವರು ಲೀಗ್ ಆಯೋಜಕರಿಗೆ ಸಂಸ್ಥೆಯ ವತಿಯಿಂದ ರೂ 1 ಲಕ್ಷ ದೇಣಿಗೆ ನೀಡಿ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.

ಕಬಡ್ಡಿಯಂತಹ ಗ್ರಾಮೀಣ ಹಾಗೂ ಸ್ಥಳೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕ್ರೀಡೆಯನ್ನು ಉತ್ತೇಜಿಸುವುದು ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಹನಾಶ್ರೀ ಫೌಂಡೇಶನ್ ಕೈಗೊಂಡಿರುವ ಈ ಸಹಕಾರ ಮಹತ್ವದ್ದಾಗಿದೆ. ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಂಸ್ಥೆಯ ಸಾಮಾಜಿಕ ಬದ್ಧತೆಯ ಮತ್ತೊಂದು ಹೆಜ್ಜೆಯಾಗಿ ಈ ಸಹಕಾರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಕೆ. ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಅನಂತ ಕೃಷ್ಣ ಯಾದವ್, ದೀಪಕ್ ಸೇರಿದಂತೆ ಗಣ್ಯರು, ಕ್ರೀಡಾ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕ್ರೀಡಾಪಟುಗಳ ಪ್ರತಿಭೆಗೆ ಉತ್ತೇಜನ ನೀಡುವುದು, ಯುವಜನತೆಯನ್ನು ಕ್ರೀಡೆಯತ್ತ ಪ್ರೇರೇಪಿಸುವುದು ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ನಿರಂತರವಾಗಿ ಕೈಜೋಡಿಸುವುದು ಸಹನಾಶ್ರೀ ಫೌಂಡೇಶನ್‌ನ ಪ್ರಮುಖ ಗುರಿಯಾಗಿದೆ ಎಂದು ರಾಜೇಶ್ ಪುದುಶೇರಿ ತಿಳಿಸಿದರು.

Related posts

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

Suddi Udaya

ತಾ| ಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾದರಿಸಿದ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಸುರ್ಯ ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ಆಟಿಡೊಂಜಿ ದಿನ ಮತ್ತು ಸಾರ್ವಜನಿಕ ಕ್ರೀಡಾಕೂಟ

Suddi Udaya

ನಾಳೆ (ಅ.30): ವಿದ್ಯುತ್ ನಿಲುಗಡೆ

Suddi Udaya

ಮಾಲಾಡಿ: ಕೆತ್ತಿಗುಡ್ಡೆ ಹೊಸ ರಸ್ತೆ ಮತ್ತು ಸಂಪರ್ಕ ಸೇತುವೆ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ಮಂಜೂರು

Suddi Udaya

ಬಳ್ಳಮಂಜ ಕ್ಷೇತ್ರದ ಶ್ರೀ ಈಶ್ವರ ದೇವರ ಗರ್ಭಗುಡಿಯ ಪಾದುಕನ್ಯಾಸ

Suddi Udaya
error: Content is protected !!