ಬೆಳ್ತಂಗಡಿ: ಸರ್ಕಾರಿ ಪದವಿ ಕಾಲೇಜು, ಅಳದಂಗಡಿಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕಿಯರ ಖೋ. ಖೋ ಪಂದ್ಯಾಟದಲ್ಲಿ ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ತಂಡವು ವಿಜಯ ಸಾಧಿಸಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ವಾಣಿ ಪದವಿ ಪೂರ್ವ ಕಾಲೇಜಿನ ತಂಡವು ಉತ್ತಮ ಕ್ರೀಡಾ ಪ್ರದರ್ಶನ ಹಾಗೂ ಸಂಘಟಿತ ಆಟದ ಮೂಲಕ ಗಮನಾರ್ಹ ಸಾಧನೆ ಮಾಡಿತು..











