September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

ಉಜಿರೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆ. 7ರಂದು ಜರಗಿತು. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯದ ಉಪನ್ಯಾಸಕ ಡಾಕ್ಟರ್ ರವೀಶ್ ಪಡುಮಲೆ ದೀಪ ಬೆಳಗಿಸಿ ಕಳಸಕ್ಕೆ ಬತ್ತವನ್ನು ತುಂಬಿ ಹಿಂಗಾರ ಅರಳಿಸಿ ಚೆನ್ನೆಮನೆ ಆಡುವುದರ ಮೂಲಕ ಆಟಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಆಟಿಯ ವಿಶೇಷತೆಯನ್ನು ಹಿಂದಿನ ಆಟಿಗೂ ಮತ್ತು ಈಗಿನ ಆಟಿಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿ ಅಂದು ಕಷ್ಟಕ್ಕಾಗಿ ಮಾಡುವ ತಿಂಡಿ ತಿನಿಸುಗಳು ಇಂದು ಆಡಂಬರಕ್ಕಾಗಿ ನಡೆಯುತ್ತದೆ. ಆಟಿ ತಿಂಗಳಲ್ಲಿ ಮನೆಯ ಸ್ವಚ್ಛತೆ ಬಟ್ಟೆ ಬರಗಳನ್ನು ಒಣಗಲು ಹಾಕುವಂಥದ್ದು, ಆಟಿ ತಿಂಗಳು ಆನೆಯಾಗೆ ನಡೆದರೆ ಸೋಣ ತಿಂಗಳು ಕುದುರೆಯಾಗಿ ಓಡುತ್ತದೆ
ಆಟಿ ತಿಂಗಳಿನಲ್ಲಿ ಮಾಡುವ ತಿನಿಸುಗಳು ಔಷಧೀಯ ಗುಣವುಳ್ಳದ್ದು ಎಂದರು.

ಅಕ್ಷಯ್ ಕುಮಾರ್ ಉದ್ಯಮಿಗಳು ಜಿನ ಪದ್ಮ ಉಜಿರೆ , ಇವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಆಟಿ ತಿಂಗಳ ಸೊಬಗು ಕಷ್ಟಕಾಲದಲ್ಲಿ ಮಾಡುತ್ತಿರುವ ತಿನಿಸುಗಳು ಅದರಲ್ಲಿರುವ ಔಷಧೀಯ ಗುಣ ಇತ್ಯಾದಿಗಳ ಬಗ್ಗೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷ ಶಾಲಾ ಮುಖ್ಯೋಪಾಧ್ಯಾಯರಾದ ವಿದ್ಯಾಕಿರಣ್ ಆಟಿ ತಿಂಗಳ ವಿಶೇಷತೆಯ ಬಗ್ಗೆ ತಿಳಿಸಿದರು.
ಹಿರಿಯ ಶಿಕ್ಷಕರಾದ ಮೋನಪ್ಪ ಗೌಡ ಮತ್ತು ವಿಶ್ವನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮನರಂಜನ ಕಾರ್ಯಕ್ರಮವನ್ನು ನೀಡಿದರು. ಹಿಂದಿ ಭಾಷಾ ಬೋಧಕರಾದ ಮೋನಪ್ಪ ಗೌಡ ಸ್ವಾಗತಿಸಿದರು. ಇಂಗ್ಲಿಷ್ ಭಾಷಾ ಅಧ್ಯಾಪಕ ವಿಶ್ವನಾಥ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರುತ ಆಳ್ವ ಮತ್ತು ಪೂಜಾ ಕಾರ್ಯಕ್ರಮ ನಿರೂಪಿಸಿದರು.

Related posts

ನೂತನ ಡಿವೈಎಸ್‌ಪಿ ಅವರನ್ನು ಭೇಟಿ ಮಾಡಿ ತಾಲೂಕಿಗೆ ಸ್ವಾಗತಿಸಿದ ಮುಸ್ಲಿಂ ಒಕ್ಕೂಟದ ಮುಖಂಡರು

Suddi Udaya

ಶ್ರೀ ಕ್ಷೇತ್ರ ಓಡೀಲು ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಗೌರವಾರ್ಪಣೆ

Suddi Udaya

ಮೂಡುಬಿದಿರೆ ಸ್ವಸ್ತೀಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರಿಂದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಲಾಯಿಲ: ಗಂಗಮ್ಮ ಪೂಜಾರಿ ನಿಧನ

Suddi Udaya

ಸವಣಾಲು: ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಪ್ರಕರಣ ದಾಖಲು

Suddi Udaya

ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ

Suddi Udaya
error: Content is protected !!