September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಐಆ‌ರ್ ಆ.17 ರವರೆಗೆ ವಿಸ್ತರಣೆ

ಬೆಳ್ತಂಗಡಿ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅವಧಿಯನ್ನು ಪುನಃ ವಿಸ್ತರಿಸಲಾಗಿದೆ. ಅದರಂತೆ ಗಣತಿ ನಮೂನೆಗಳ ಸಲ್ಲಿಕೆಗೆ ಆ. 8ರ ಬದಲು ಆ. 17 ಕೊನೆಯ ದಿನವಾಗಿದೆ.

ಗಣತಿ ನಮೂನೆಗಳ ಭರ್ತಿ ಹಾಗೂ ವಾಪಸ್ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯದಲ್ಲಿ ಗೈರು, ನಿಧನ, ಶಾಶ್ವತ ಸ್ಥಳಾಂತರ, ನಕಲಿ, ಇತರ (ಎಎಸ್‌ಡಿಡಿಒ) ದೊಡ್ಡ ಸಂಖ್ಯೆಯಲ್ಲಿ (1.10 ಕೋಟಿ) ಆಗಿರುವುದರಿಂದ ಅವುಗಳ ಪರಿಶೀಲನೆಗೆ ರಾಜಕೀಯ ಪಕ್ಷಗಳು ಹಾಗೂ ಮತದಾರರಿಗೆ ಅವಕಾಶ ನೀಡಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಚುನಾವಣ ಆಯೋಗದ ಪರಿಷ್ಕೃತ ವೇಳಾಪಟ್ಟಿ ಯಂತೆ ಕರಡು ಮತದಾರರ ಪಟ್ಟಿ ಆ. 24ರಂದು ಪ್ರಕಟವಾಗಲಿದೆ. ಆಕ್ಷೇಪಣೆ ಸಲ್ಲಿಸಲು ಆ. 24ರಿಂದ ಸೆ.23, ನೋಟಿಸ್ ಜಾರಿ, ಅವುಗಳ ಪರಿಶೀಲನೆ, ಇತ್ಯರ್ಥಕ್ಕೆ ಆ. 24ರಿಂದ ಅ. 22ರ ವರೆಗೆ ಅವಕಾಶ ಇರಲಿದೆ. ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

Related posts

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya

ಸೌಜನ್ಯ ಪ್ರಕರಣ ಮರು ತನಿಖೆ ಕೋರಿದ ಅರ್ಜಿ: ಸರಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ

Suddi Udaya

ಶಿಶಿಲ ಜಯರಾಮ ನೆಲ್ಲಿತ್ತಾಯರಿಗೆ ” ಭಜನಾ ಭಾಸ್ಕರ ” ಪ್ರಶಸ್ತಿ :

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya
error: Content is protected !!