26.2 C
ಪುತ್ತೂರು, ಬೆಳ್ತಂಗಡಿ
August 8, 2026
ನಿಧನ

ಸಾರ್ವಜನಿಕ ಗಣೇಶೋತ್ಸವದ ಹಿರಿಯ ಅರ್ಚಕ ಶಿವರಾಮ ಸೋಮಯಾಜಿ ವಿಧಿವಶ

ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಗಣೇಶೋತ್ಸವದ ಹಿರಿಯ ಅರ್ಚಕರಾಗಿ ಐದು ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಶಿವರಾಮ ಸೋಮಯಾಜಿ (91) ಅವರು ವಿಧಿವಶರಾಗಿದ್ದಾರೆ.

ಸಾರ್ವಜನಿಕ ಗಣೇಶೋತ್ಸವದ ಆರಂಭದ ವರ್ಷದಿಂದಲೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಅವರು, 50 ವರ್ಷಕ್ಕೂ ಮೀರಿದ ಸುದೀರ್ಘ ಅವಧಿಯಲ್ಲಿ ಗಣೇಶೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಗಣೇಶೋತ್ಸವದೊಂದಿಗೆ ಐದು ದಶಕಗಳಿಗೂ ಹೆಚ್ಚು ಕಾಲದ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ಬೆಳ್ತಂಗಡಿ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ ಶ್ರೀಮತಿ ಲೀಲಾವತಿ, ಪುತ್ರ ವಾಸುದೇವ ಸೋಮಯಾಜಿ (ನಿವೃತ್ತ SBI ಉದ್ಯೋಗಿ), ಸೊಸೆ ಶ್ರೀಮತಿ ವಿದ್ಯಾ ಸೋಮಯಾಜಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಪಾರ ಬಂಧುಮಿತ್ರರು ಹಾಗೂ ಹಿತೈಷಿಗಳನ್ನು ಅವರು ಅಗಲಿದ್ದಾರೆ.

ಅವರ ನಿಧನಕ್ಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂತಿಮ ವಿಧಿವಿಧಾನಗಳು ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related posts

ಬಳಂಜ ಬೊಂಟ್ರೋಟ್ಟು ಗುತ್ತು ಮನೆತನದ ಶಾಂಭವಿ ಅನಾರೋಗ್ಯದಿಂದ ನಿಧನ

Suddi Udaya

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಕೊಕ್ಕಡ: ಕೆಂಗುಡೇಲು ನಿವಾಸಿ ಪೂವಣಿ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕಲ್ಮಂಜ: ರಾಧಾಕೃಷ್ಣ ಗೌಡ ನಿಧನ

Suddi Udaya

ರೆಖ್ಯ: ಪರಕ್ಕಳ ನಿವಾಸಿ ಶಾಂತ ಭಟ್ ಹೃದಯಾಘಾತದಿಂದ ನಿಧನ

Suddi Udaya

ವೇಣೂರು: ಪಡ್ಡಂದಡ್ಕ ನಿವಾಸಿ, ಹೋಟೆಲ್ ಉದ್ಯಮಿ ಹಂಝ ನಿಧನ

Suddi Udaya
error: Content is protected !!