27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮಂಗಳೂರು ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ

ಮಂಗಳೂರು: ಮಂಗಳೂರು ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇಂದು(ಜೂ.23) ನಿಧನರಾಗಿದ್ದಾರೆ.

ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಯಿಂದ ಮಂಗಳೂರಿನ ಬೆಲ್ಯೆ ಪಲ್ಲಿ (ಝೀನತ್ ಭಕ್ಷ್) ಮಸೀದಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಬಳಿಕ ಮಸೀದಿಯಲ್ಲಿ ಜನಾಝ ಸ್ನಾನ ಮತ್ತು ಜನಾಝ ನಮಾಝ್ ನಡೆಯಲಿದೆ. ಬಳಿಕ‌ ಕಾಸರಗೋಡಿನ ಅವರ ಮನೆಗೆ ಪಾರ್ಥಿವ ಶರೀರ ರವಾನೆಯಾಗಲಿದೆ.

ಕಾಸರಗೋಡು ಮನೆಯಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಮೂಡುಬಿದಿರೆಯ ಕಾಶಿಪಟ್ಣದ ದಾರುನ್ನೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಯುವ ವಿಭಾಗದ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು ಶ್ರೀ.ಧ. ಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಕಲ್ಮಂಜ: ಉಳ್ಳಾಯ ಉಳ್ಳಾಲ್ತಿ ದೈವಸ್ಥಾನ ಪರಾರಿ ಮಜಲ್ ಗುಂಡ ಇದರ ನೂತನ ದೇಗುಲದ ಶಿಲಾನ್ಯಾಸ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ

Suddi Udaya

ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಜ.11: ನಾರಾವಿಯಲ್ಲಿ ನೂತನ ಗುರು ಮಂದಿರ, ಭಜನಾ ಮಂದಿರ ಉದ್ಘಾಟನೆ ಹಾಗೂ 171ನೇ ವರ್ಷದ ಗುರು ಜಯಂತಿ ಆಚರಣೆ

Suddi Udaya
error: Content is protected !!