August 9, 2026
ಆರೋಗ್ಯ

ಉಜಿರೆಯ SDM ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಮತ್ತು MRI ಸೇವೆ,ಬೆಳ್ತಂಗಡಿ ತಾಲೂಕಿಗೆ ದೊಡ್ಡ ವರದಾನ ದಿನೇಶ್ ಪೂಜಾರಿ

ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕ, ಪ್ರಗತಿ-ಬಂಧು ಜ್ಞಾನ-ವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ವಲಯ, ಮೇಲಂತಬೆಟ್ಟು
ಜನಜಾಗೃತಿ ವೇದಿಕೆ ಬೆಳ್ತಂಗಡಿ ವಲಯ, ಮೇಲಂತಬೆಟ್ಟು ವಲಯ
ವಲಯ ಭಜನಾ-ಪರಿಷತ್ತು ಬೆಳ್ತಂಗಡಿ,
ವಲಯ ಶ್ರಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ತಂಗಡಿ ವಲಯ ಇದರ ಸಂಯುಕ್ತ ಆಶ್ರಯಯದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಜಿರೆಯ SDM ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಇಲ್ಲಿಯ ತಜ್ಞ-ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳ್ತಂಗಡಿ ಶ್ರೀ ಮಂಜುನಾಥ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಕೇಂದ್ರ ಕಚೇರಿಯ ಜ್ಞಾನ-ವಿಕಾಸ ವಿಭಾಗದ ನಿರ್ದೇಶಕರಾದ ದಿನೇಶ್ ಪೂಜಾರಿಯವರು ಮನುಷ್ಯನ ಹೊರಗಿನ ಸೌಂದರ್ಯಕ್ಕಿಂತ ದೇಹದ ಒಳಗಿನ ಸೌಂದರ್ಯ ಮುಖ್ಯವಾಗಿದ್ದು,ಕಾಯಿಲೆ ಬರುವುದಕ್ಕಿಂತ ಮುಂಚಿತವಾಗಿ ಆರೋಗ್ಯ ತಪಾಸನೆಯನ್ನು ಮಾಡಿದಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಉಜಿರೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಎಲ್ಲರೂ ಇದರ ಪ್ರಯೋಜನವನ್ನು ಪಡೆಯುವ೦ತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಯುತ ತುಕಾರಾಮರವರು ದುಬಾರಿ ಬೆಲೆಯ ವೈದ್ಯಕೀಯ ಚಿಕಿತ್ಸೆ ಇರುವಂತಹ ಈ ಕಾಲಘಟ್ಟದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ SDM ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯವು ನಮ್ಮ ಊರಿನಲ್ಲಿ ದೊರಕುತ್ತಿರುವುದು ನಮ್ಮ ಸೌಭಾಗ್ಯ ಎಂದರು.ಎಸ್ ಡಿ ಎಂ ಆಸ್ಪತ್ರೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯವರಾದ ಸೌಮ್ಯರವರು SDM ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ,
ಬೆಳ್ತಂಗಡಿ ಒಕ್ಕೂಟದ ಅಧ್ಯಕ್ಷರಾದ ದಯಾನಂದ ಪೂಜಾರಿಯವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು,

ವೇದಿಕೆಯಲ್ಲಿ ಕೇಂದ್ರಸಮಿತಿಯ ಅಧ್ಯಕ್ಷರಾದ ಸೀತಾರಾಮ್ ಆರ್ ಬೆಳ್ತಂಗಡಿ ,
SDM ತುರ್ತು ಚಿಕಿತ್ಸಾ ವಿಭಾಗದ ಮ್ಯಾನೇಜರ್ ರವೀಂದ್ರ ಗುಡಿಗಾರ್, ಯೋಜನಾಧಿಕಾರಿಯವರಾದ ಯಶೋಧರವರು,
ಒಕ್ಕೂಟದ ಅಧ್ಯಕ್ಷರಾದ ಚರಣ್ ಕುಮಾರ್,ಯಶವಂತ್, ಮಹೇಶ್,ಸಿದ್ದಪ್ಪಗೌಡ, ಸುಭಾಷಿಣಿ,ಯಶೋಧ,ರವರು, ಸೇವಾ ಪ್ರತಿನಿಧಿಗಳು ಉಪಸ್ತರಿದ್ದರು.ವಲಯ ಮೇಲ್ವಿಚಾರಕರಾದ ರವಿಯವರು ನಿರೂಪಿಸಿದರು,ಕಾರ್ಯಕ್ರಮಲ್ಲಿ ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್ ರವರು ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ರವರು ವಂದಿಸಿದರು

ಕಾರ್ಯಕ್ರಮದಲ್ಲಿ 500ಜನ ಆರೋಗ್ಯದ ತಪಾಸಣೆಯನ್ನು ಮಾಡಿದ್ದು,ಉಚಿತವಾಗಿ ಔಷಧಿ ಮತ್ತು ಕನ್ನಡಕದ ವಿತರಣೆ ಮಾಡಲಾಯಿತು.

Related posts

ಪಣಕಜೆ:ಆಸರೆ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆ: ಆರೋಗ್ಯ ತಪಾಸಣೆ, ಪರಿಸರದಲ್ಲಿ ಸ್ವಚ್ಚತೆ ಕಾಪಾಡುವುದರ ಬಗ್ಗೆ ಮಾಹಿತಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 20,000 ಸಹಾಯ ಧನ ವಿತರಣೆ

Suddi Udaya

ಮರೋಡಿ: ಸಾಕು ನಾಯಿಗಳಿಗೆ ಉಚಿತ ಹುಚ್ಚು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ.ಪ ಪೂ.ಕಾಲೇಜು: ವಿಶ್ವ ಯೋಗ ದಿನಾಚರಣೆ

Suddi Udaya

ಗ್ರಾಮ ಪಂಚಾಯತ್ ತಣ್ಣೀರು ಪಂತ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ.

Suddi Udaya
error: Content is protected !!