September 24, 2026
ಅಭಿನಂದನೆತಾಲೂಕು ಸುದ್ದಿವರದಿ

ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದ ಶಾಸಕ ಹರೀಶ್ ಪೂಂಜರಿಗೆ: ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಗೌರವಾರ್ಪಣೆ

ಬಳಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರೂ , ಬೆಳ್ತಂಗಡಿ ಕ್ಷೇತ್ರದ ಜನಪ್ರೀಯ ಶಾಸಕರಾಗಿರುವ ಹರೀಶ್ ಪೂಂಜಾರವರು ಇತ್ತೀಚಿಗೆ ಕರ್ನಾಟಕ ಟಿವಿ ಜನಮತದ ಆಧಾರದಲ್ಲಿ ನಡೆಸಿದ ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದಿರುವ ಸಲುವಾಗಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಅಭಿಮಾನದ ಗೌರವಾರ್ಪಣೆಯನ್ನು ಶಾಸಕರ ಗೃಹ ಮಿಥಿಲದಲ್ಲಿ ಆ.9 ರಂದು ಸನ್ಮಾನಿಸಿ ಅಭಿನಂದಿಸಿದರು.


ಈ ಸಂಧರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್ ಬಳೆಂಜ ಗುತ್ತು, ಚಂದ್ರಶೇಖರ್ ಪಿಕೆ , ಕುಳೆಂಜಿರೋಡಿ ಗುತ್ತು ಅರುಣ ಹೆಗ್ಗಡೆ, ಸತೀಶ್ ರೈ ಬಾರ್ದಡ್ಕ , ಸುರೇಶ ಶೆಟ್ಟಿ ಕುರೆಲ್ಯ, ದಿನೇಶ್ ಪಿಕೆ , ದೇಜಪ್ಪ ಪೂಜಾರಿ, ಪ್ರಭಾಕರ್ ಹೆಗ್ಡೆ ಕೊಡಿ , ಗುರುಪ್ರಸಾದ್ ಹೆಗ್ಡೆ, ಸುರೇಶ ಹೇವ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಬಳಂಜ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕ್ಷಣಗಳನ್ನು ನೆನಪಿಸಿ ದೇವಳದ ಮತ್ತು ಬಳಂಜ ಗ್ರಾಮದ ಸಮಸ್ತ ಅಭಿವೃದ್ಧಿಗೆ ಸದಾ ಜತೆಯಾಗಿರುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು. ಚಂದ್ರಶೇಖರ್ ಪಿಕೆ ಗ್ರಾಮಸ್ಥರ ಪರವಾಗಿ ಅಭಿನಂದನಾ ನುಡಿಗಳನ್ನಾಡಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Suddi Udaya

ಕಾಜಿಮುಗೇರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತರಾಮ ಹೆಬ್ಬಾರ್ ವಿಧಿವಶ

Suddi Udaya

ಬೆಳ್ತಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಿ. ವಿಜಯ ಕುಮಾರ್ ಗೆ ಕರ್ನಾಟಕದ ಡಿಜಿ ಮತ್ತು ಐಜಿಪಿ ರವರ ಪ್ರಶಂಸ ಪದಕ ಪ್ರದಾನ

Suddi Udaya

ಚಾರ್ಮಾಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಉದ್ಯೋಗ ಖಾತರಿ ವಿಶೇಷ ಗ್ರಾಮ ಸಭೆ, ಜಾಥಾ

Suddi Udaya

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

Suddi Udaya
error: Content is protected !!