September 24, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಬೆಸ್ಟ್ ಎಂ.ಎಲ್.ಎ. ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ನಾವೂರಿನ ಭಕ್ತಾದಿಗಳಿಂದ ಸನ್ಮಾನ

ಬೆಳ್ತಂಗಡಿ: ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಬೆಳ್ತಂಗಡಿ ತಾಲೂಕಿನ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡ ಜನಸ್ನೇಹಿ ಕಾರ್ಯಕ್ರಮಗಳನ್ನು ಗುರುತಿಸಿ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “BEST MLA” ಪ್ರಶಸ್ತಿ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ಜನಪ್ರಿಯ ಶಾಸಕರಾದ ಶ ಹರೀಶ್ ಪೂಂಜರವರನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ (ರಿ )ನಾವೂರು ಹಾಗೂ ನಾವೂರಿನ ಭಕ್ತಾದಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವದ ಅಧ್ಯಕ್ಷರಾದ ಡಾ. ಪ್ರದೀಪ್ ಎ. ಆರೋಗ್ಯ ಕ್ಲಿನಿಕ್ ನಾವೂರು, ಟ್ರಸ್ಟ್ ನ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ಪ್ರಧಾನ ಕಾರ್ಯದರ್ಶಿಗಳಾದ ದರ್ಣಪ್ಪ ಕೆ, ಸದಸ್ಯರಾದ ಗಣೇಶ್ ಕನಾಲು, ಹರೀಶ್ ಕಾರಿಂಜ, ಗಣೇಶ್ ಗೌಡ ನೆಲ್ಲಿಪಲಿಕೆ, ತನಿಯಪ್ಪ ಕಿರ್ನಡ್ಕ, ತಿಮ್ಮಪ್ಪ ಕಿರ್ನಡ್ಕ, ಯುವರಾಜ್ ಭಂಡಾರಿ, ಇಡ್ಯಾಲ,ಪೂವಪ್ಪ ಗೌಡ ಪುನ್ಕೇತ್ಯಾರು, ಸುರೇಶ್ ಗೌಡ, ಗೋಳಿದಡಿ, ಪ್ರದೀಪ್ ಗೌಡ ನಾಗಾಜೆ, ಸುರೇಶ್ ಪೂಜಾರಿ ಪೊಯ್ಯೆಲೆ, ಜಗದೀಶ್ ಇಡ್ಯಾಲ, ನಾವೂರು ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಸತೀಶ್ ಸಾಲ್ಯಾನ್ ಮೊರ್ತಾಜೆ, ಮಹಿಳಾ ಸಮಿತಿ ಅಧ್ಯಕ್ಷರಾದ ಪ್ರಿಯಾ ಲಕ್ಷ್ಮಣ ಸಂಪಿಂಜ, ರೂಪ ಭಂಡಾರಿ, ಡಾ. ಕವಿತಾ ಪ್ರದೀಪ್, ಗ್ರಾಮ ಪಂಚಾಯತ್ ನಾವೂರಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುನಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya

ಫೆ.3: ಪೇಪರ್ ಲೇಸ್ ರಿಜಿಸ್ಟ್ರೇಷನ್ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

Suddi Udaya

ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಸಮಗ್ರ ಪ್ರಶಸ್ತಿ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!